ನಾಳೆ ಬಿಡುಗಡೆಯಾಗಲಿದೆ ‘ಜಡ್ಜ್‌ಮೆಂಟ್‌’ ಚಿತ್ರದ ವಿಡಿಯೋ ಹಾಡು

ಮೇ 24ಕ್ಕೆ ರಾಜ್ಯದಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಗುರುರಾಜ ಕುಲಕರ್ಣಿ ನಿರ್ದೇಶನದ ನಿರೀಕ್ಷಿತ ‘ಜಡ್ಜ್‌ಮೆಂಟ್‌’ ಚಿತ್ರದ ವಿಡಿಯೋ ವಿಡಿಯೋ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರವಿಚಂದ್ರನ್ ದಿಗಂತ್, ಮೇಘನಾ ಗಾಂವ್ಕರ್ ಮತ್ತು ಧನ್ಯ ರಾಮ್ ಕುಮಾರ್ ಮುಖ್ಯ  ಭೂಮಿಕೆಯಲ್ಲಿದ್ದು, ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಲಕ್ಷ್ಮಿ ಗೋಪಾಲಸ್ವಾಮಿ, ಟಿಎಸ್ ನಾಗಭರಣ, ಸುಜಯ್ ಶಾಸ್ತ್ರಿ, ಕೃಷ್ಣ ಹೆಬ್ಬಾಳೆ, ರವಿಶಂಕರ್ ಗೌಡ, ರೂಪ ರಾಯಪ್ಪ ಮತ್ತು ರೇಖಾ ಕೂಡ್ಲಿಗಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ.

g9 ಕಮ್ಯುನಿಕೇಶನ್ ಮೀಡಿಯಾ & ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಕೆಂಪರಾಜು ಸಂಕಲನ, ರಮೇಶ್ ಸಂಭಾಷಣೆ, ರಾಮ್ ಕಿರಣ್ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನವಿದೆ.

https://twitter.com/PichharKannada/status/1788097130084585833

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read