HomeEntertainment'ತಮಟೆ' ಚಿತ್ರದ ವಿಡಿಯೋ ಹಾಡು ರಿಲೀಸ್

‘ತಮಟೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಮಯೂರ್ ಪಟೇಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾದಂಬರಿ ಆಧಾರಿತ ‘ತಮಟೆ’ ಚಿತ್ರದ ವಿಡಿಯೋ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ”ಉತ್ತರ ದಿಕ್ಕಿಗೆ ರಾಣಿ ಒಬ್ಬಳು” ಎಂಬ ಈ ಹಾಡಿಗೆ ಸಂತೋಷ್ ವೆಂಕಿ ಮತ್ತು ಅನನ್ಯ ಪ್ರಕಾಶ್ ಧ್ವನಿಯಾಗಿದ್ದು, ಪದ್ಮಶ್ರೀ ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ವಂದನಾ ಎಂ ನಿರ್ಮಾಣ ಮಾಡಿದ್ದು, ಮದನ್ ಪಾಟೀಲ್, ಚಂದು ಗೌಡ, ಐಶ್ವರ್ಯ, ವಿನಯಾ ಪ್ರಸಾದ್, ವಾಣಿಶ್ರೀ ಹಾಗೂ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮದನ್ ಪಾಟೀಲ್ ಸಂಗೀತ ಸಂಯೋಜನೆ ನೀಡಿದ್ದಾರೆ. ಗುರುಪ್ರಸಾದ್ ಸಂಕಲನ, ವೀರೇಶ್ ದೊಡ್ಡಬಳ್ಳಾಪುರ ಅವರ ಸಂಭಾಷಣೆ, ವೆಸ್ಲಿ ಬ್ರೌನ್ ಛಾಯಾಗ್ರಾಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular