HomeEntertainmentಜನವರಿ 15 ಕ್ಕೆ ಬಿಡುಗಡೆಯಾಗಲಿದೆ 'supplier ಶಂಕರ' ಚಿತ್ರದ ವಿಡಿಯೋ ಹಾಡು

ಜನವರಿ 15 ಕ್ಕೆ ಬಿಡುಗಡೆಯಾಗಲಿದೆ ‘supplier ಶಂಕರ’ ಚಿತ್ರದ ವಿಡಿಯೋ ಹಾಡು

ಫೆಬ್ರವರಿ ಎರಡರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ಸಪ್ಲೇಯರ್ ಶಂಕರ ಸಿನಿಮಾ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ.  ಈ ಚಿತ್ರದ ವಿಡಿಯೋ ಹಾಡೊಂದು ಜನವರಿ 15ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಬಾರ್ ಸಪ್ಲೈಯರ್ ಗಳ ಕುರಿತ ಹಾಡು ಇದಾಗಿದ್ದು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿದೆ.

ರಂಜಿತ್ ಸಿಂಗ್ ನಿರ್ದೇಶನದ ಈ ಸಿನಿಮಾದಲ್ಲಿ ನಿಶ್ಚಿತ್ ಕೊರೋಡಿ ಮತ್ತು ದೀಪಿಕಾ ಆರಾಧ್ಯ ಸೇರಿದಂತೆ ಗೋಪಾಲಕೃಷ್ಣನ್ ದೇಶಪಾಂಡೆ, ಜ್ಯೋತಿರಾಯ್, ವಿಜಯ್ ವಿಶ್ವನಾಥ್, ನವೀನ್ ಡಿ ಪಡೀಲ್ ತೆರೆ ಹಂಚಿಕೊಂಡಿದ್ದಾರೆ. ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular