HomeIndiaಮೈ ಕೈ ಮುಟ್ಟಿದ ಪ್ರಯಾಣಿಕ; ಗಾಬರಿಗೊಂಡು ರೈಲಿನಿಂದ ಹಾರಿದ ಶಿಕ್ಷಕಿ

ಮೈ ಕೈ ಮುಟ್ಟಿದ ಪ್ರಯಾಣಿಕ; ಗಾಬರಿಗೊಂಡು ರೈಲಿನಿಂದ ಹಾರಿದ ಶಿಕ್ಷಕಿ

ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರಿಗೆ ಸಹ ಪ್ರಯಾಣಿಕ ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ ಕಾರಣ ಗಾಬರಿಗೊಂಡು ಚಲಿಸುತ್ತಿರುವ ರೈಲಿನಿಂದ ಹಾರಿ ಗಾಯಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿಯವರು 25 ವರ್ಷದ ಈ ಮಹಿಳೆ ವಿಶಾಖ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಾನಮತ್ತನಾಗಿದ್ದ ಸಹ ಪ್ರಯಾಣಿಕ ರೈಲು ಮಿರಿಯಾಲಗುಡ ನಿಲ್ದಾಣ ದಾಟಿದ ಬಳಿಕ ಆಕೆಯ ಮೈ ಮುಟ್ಟಿ ಕೈ ಹಿಡಿದು ಎಳೆದಿದ್ದಾನೆ.

ಇದರಿಂದ ಗಾಬರಿಗೊಂಡ ಶಿಕ್ಷಕಿ ರೈಲಿನ ಸ್ಲೀಪರ್ ಕೋಚ್ ನಿಂದ ಹಾರಿದ್ದು, ಆತ ಕೂಡ ಕೆಳಗೆ ಬಿದ್ದಿದ್ದಾನೆ. ಗಾಯಗೊಂಡಿರುವ ಇಬ್ಬರನ್ನು ಸಹ ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿರುವ ಪೊಲೀಸರು, ಶಿಕ್ಷಕಿ ಪತಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular