HomeEntertainmentಇಂದು ಬಿಡುಗಡೆಯಾಗಲಿದೆ ನವರಸ ನಾಯಕ ಜಗ್ಗೇಶ್ ಅಭಿನಯದ 'ರಂಗನಾಯಕ' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರದ ಟ್ರೈಲರ್

ಮಾರ್ಚ್ ಎಂಟಕ್ಕೆ ರಾಜ್ಯದಾದ್ಯಂತ ತೆರೆ ಮೇಲೆ ಬರಲಿರುವ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗ ನಾಯಕ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು,  ಇತ್ತೀಚಿಗಷ್ಟೇ ”ಗಾಳಿ ತಂಗಾಳಿ ಕನ್ನಡ ಮಾತಾಡೇ” ಎಂಬ ಹಾಡಿನ ಮೂಲಕ ಗಾನ ಪ್ರಿಯರ ಗಮನ ಸೆಳೆದಿದೆ. ರಂಗ ನಾಯಕ ಚಿತ್ರ ತಂಡ ಇಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ಗುರುಪ್ರಸಾದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಗ್ಗೇಶ್ ಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ. ಎ ಆರ್ ವಿಖ್ಯಾತ್ ತಮ್ಮ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ಸಾಮ್ರಾಟ್ ಅಶೋಕ್  ಛಾಯಾಗ್ರಾಹಣವಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular