HomeKarnatakaBREAKING: ಅಭಿಮಾನಿ ಕಾಲಿನ ಮೇಲೆ ಹರಿದ ನಟ ಯಶ್ ಬೆಂಗಾವಲು ವಾಹನ

BREAKING: ಅಭಿಮಾನಿ ಕಾಲಿನ ಮೇಲೆ ಹರಿದ ನಟ ಯಶ್ ಬೆಂಗಾವಲು ವಾಹನ

ಬಳ್ಳಾರಿ: ಅಭಿಮಾನಿಯ ಕಾಲಿನ ಮೇಲೆ ನಟ ಯಶ್ ಅವರ ಬೆಂಗಾವಲು ವಾಹನ ಹರಿದ ಘಟನೆ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನಲ್ಲಿ ನಡೆದಿದೆ.

ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ರಾಕಿಂಗ್ ಸ್ಟಾರ್ ಯಶ್ ಆಗಮಿಸಿದ್ದರು. ಈ ವೇಳೆ ಯಶ್ ಅವರನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದರು. ಯಶ್ ತೆರಳುವ ವೇಳೆ ಅವರ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನ ಹರಿದಿದೆ.

ಘಟನೆಯಲ್ಲಿ ಸಿರಗುಪ್ಪದ ವಸಂತ್ ಎಂಬ ಯುವಕ ಗಾಯಗೊಂಡಿದ್ದಾನೆ. ಅಭಿಮಾನಿ ವಸಂತ್ ಪಾದದ ಮೇಲೆ ವಾಹನ ಹರಿದಿದೆ. ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular