HomeEntertainmentಇಂದು ಬಿಡುಗಡೆಯಾಗಲಿದೆ 'ಮೇಘ' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ‘ಮೇಘ’ ಚಿತ್ರದ ಟ್ರೈಲರ್

ಚರಣ್ ಕಥೆ ಬರೆದು ನಿರ್ದೇಶಿಸಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ ‘ಮೇಘ’ ಚಿತ್ರದ ಟ್ರೈಲರ್ ಇಂದು ಸಂಜೆ ಆರು ಮೂವತ್ತಕ್ಕೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರವನ್ನು ಕೃಷಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಯತೀಶ್ ಎಚ್ ಆರ್ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ ಶೋಭರಾಜ್, ಸಂಗೀತ, ತರಂಗ ವಿಶ್ವ, ಶ್ರೀವಿದ್ಯಾ ಶಾಸ್ತ್ರಿ, ಹಂಸ ಪ್ರತಾಪ್, ನಾಗೇಂದ್ರ ಶಾ, ಸುಂದರ್ ವೀಣಾ, ಗಿರೀಶ್ ರಾಜಾಹುಲಿ, ನಾಗಮಂಗಲ ಜಯರಾಮ್, ಹನುಮಂತ ಗೌಡ, ಸೌರಬ್ ಕುಲಕರ್ಣಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ, ಗೌತಮ್ ನಾಯಕ್  ಅವರ ಸಂಕಲನ ಹಾಗೂ ಛಾಯಾಗ್ರಹಣವಿದ್ದು, ಲಕ್ಷ್ಮಿ ವೇಷಭೂಷಣ, ಬಾಲ ಮಾಸ್ಟರ್ ನೃತ್ಯ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular