HomeEntertainmentಇಂದು ಬಿಡುಗಡೆಯಾಗಲಿದೆ 'ಲಂಗೋಟಿ ಮ್ಯಾನ್' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ‘ಲಂಗೋಟಿ ಮ್ಯಾನ್’ ಚಿತ್ರದ ಟ್ರೈಲರ್

ಸಂಜೋತಾ ಭಂಡಾರಿ ನಿರ್ದೇಶನದ ಆಕಾಶ್ ರ‍್ಯಾಂಬೋ ಅಭಿನಯದ ‘ಲಂಗೋಟಿ ಮ್ಯಾನ್’ ಚಿತ್ರ ಇದೇ ಸೆಪ್ಟೆಂಬರ್ 20ರಂದು ತೆರೆ ಕಾಣಲಿದ್ದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ ಚಿತ್ರ ತಂಡ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ಆಕಾಶ ರಾಂಬೊ ಸೇರಿದಂತೆ ಸ್ನೇಹಾ ಖುಷಿ, ಸಂಹಿತಾ ವಿನ್ಯಾ, ಧೀರೇಂದ್ರ ಎಸ್, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಾಯಿ ಪವನಕುಮಾರ್ ಎಂ, ಪಲ್ಟಿ ಗೋವಿಂದ್, ಮಹಾಲಕ್ಷ್ಮಿ ವಿ ತೆರೆ ಹಂಚಿಕೊಂಡಿದ್ದು, ತನು ಟಾಕೀಸ್ ಸಂಸ್ಥೆ ನಿರ್ಮಾಣ ಮಾಡಿದೆ. ಮನು ಮತ್ತು ಸ್ವರಾಜ್ ಪತ್ರಿಮಠ ಅವರ ಸಂಕಲನ ರವಿವರ್ಮ ಛಾಯಾಗ್ರಹಣ ಸುಮೇದ್ ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular