HomeEntertainmentಇಂದು ಬಿಡುಗಡೆಯಾಗಲಿದೆ 'ಕೆರೆ ಬೇಟೆ' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ‘ಕೆರೆ ಬೇಟೆ’ ಚಿತ್ರದ ಟ್ರೈಲರ್

ಮಾರ್ಚ್ 15ಕ್ಕೆ ತೆರೆ ಮೇಲೆ ಬರಲು ಸಜ್ಜಾಗಿರುವ ಗೌರಿಶಂಕರ್ ಅಭಿನಯದ  ‘ಕೆರೆಬೇಟೆ’ ಚಿತ್ರದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.  ಬಿಡುಗಡೆ ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಲಿದ್ದು, ಚಿತ್ರತಂಡ ಅವರ ಕೈಯಿಂದಲೇ ಈ ಟ್ರೈಲರ್ ಲಾಂಚ್ ಮಾಡಿಸಲಿದೆ.

ರಾಜ್ ಗುರು ನಿರ್ದೇಶನದ ಈ ಚಿತ್ರದಲ್ಲಿ ಗೌರಿಶಂಕರ್ ಅವರಿಗೆ ಜೋಡಿಯಾಗಿ ಬಿಂದು ಶಿವರಾಂ ಅಭಿನಯಿಸಿದ್ದು, ಸಂಪತ್ ಮೈತ್ರಿಯ, ಗೋಪಾಲ ದೇಶ್ಪಾಂಡೆ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ ಹಾಗೂ ರಾಮದಾಸ್ ಬಣ್ಣ ಹಚ್ಚಿದ್ದಾರೆ. ಗಗನ್ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular