HomeEntertainmentಇಂದು ರಿಲೀಸ್ ಆಗಿದೆ 'ಭರ್ಜರಿ ಗಂಡು' ಚಿತ್ರದ ಟ್ರೈಲರ್

ಇಂದು ರಿಲೀಸ್ ಆಗಿದೆ ‘ಭರ್ಜರಿ ಗಂಡು’ ಚಿತ್ರದ ಟ್ರೈಲರ್

ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರ ಇದೇ ಏಪ್ರಿಲ್ 5ಕ್ಕೆ ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಚಿತ್ರ ತಂಡ ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಪ್ರಸಿದ್ಧ್ ಸಿನಿಮಾಸ್ ಕ್ಯಾಂಪ್ ಬ್ಯಾನರ್ ನಡಿ ಪ್ರಸಿದ್ಧ್, ಮದನ್ ಗೌಡ ಮತ್ತು ಅನಿಲ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಿರಣ್ ರಾಜ್ ಮತ್ತು ಯಶ ಶಿವಕುಮಾರ್ ಪ್ರಮುಖ ಪಾತ್ರದಲ್ಲಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ. ವೆಂಕಿ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಹಣವಿದೆ. ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular