HomeEntertainmentನಾಳೆ ಬರಲಿದೆ 'ಜಿಗರ್' ಚಿತ್ರದ ಮೇಕಿಂಗ್ ವಿಡಿಯೋ

ನಾಳೆ ಬರಲಿದೆ ‘ಜಿಗರ್’ ಚಿತ್ರದ ಮೇಕಿಂಗ್ ವಿಡಿಯೋ

ಸೂರಿ ಕುಂದರ್ ನಿರ್ದೇಶನದ ಪ್ರವೀಣ್ ತೇಜ್ ಅಭಿನಯದ ‘ಜಿಗರ್’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು,  ಶೀಘ್ರದಲ್ಲೇ ತೆರೆ ಮೇಲೆ ಬರಲು ಸಜ್ಜಾಗಿದೆ.’ಜಿಗರ್’ ಚಿತ್ರತಂಡ ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದು, ನಾಳೆ ಮೇಕಿಂಗ್ ವಿಡಿಯೋ ಒಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಮತ್ತು ವಿಜಯ್ ಶ್ರೀ ಕಲ್ಬುರ್ಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಯು ಕೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಮತ್ತು ಶಿವಸೇನಾ ಛಾಯಾಗ್ರಹಣವಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular