HomeEntertainmentರಿಲೀಸ್ ಆಯ್ತು 'ಅಂಶು' ಚಿತ್ರದ ಟ್ರೈಲರ್

ರಿಲೀಸ್ ಆಯ್ತು ‘ಅಂಶು’ ಚಿತ್ರದ ಟ್ರೈಲರ್

ಕಿರುತೆರೆ ನಟಿ ನಿಶಾ ರವಿ ಕೃಷ್ಣನ್ ಅಭಿನಯಿಸಿರುವ ‘ಅಂಶು’ ಚಿತ್ರದ ಟ್ರೈಲರ್ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದ್ದು, ನೋಡುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಶೃತಿ ಹರಿಹರನ್ ಹಾಗೂ ಕಾಜಲ್ ಕುಂದರ್ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರವನ್ನು ಗ್ರಹಣ lip ಫಿಲಂಸ್  ಸಂಸ್ಥೆ ನಿರ್ಮಾಣ ಮಾಡಿದ್ದು, ಚೆಲುವರಾಜ್, ಪ್ರಮೋದ್ ಚಿನ್ನಸ್ವಾಮಿ ಹಾಗೂ ಜಯಚಂದ್ರ ಎಲ್ಲಪ್ಪ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕೆಸಿ ಬಾಲ ಸಾರಂಗನ್ ಸಂಗೀತ ಸಂಯೋಜನೆ ನೀಡಿದ್ದು, ಎಂ ಸಿ ಚನ್ನಕೇಶವ ಹಾಗೂ ರಿಕ್ಕಿ ಮಾರ್ಟ್ ಅವರ ಸಂಕಲನ, ಮಹೇಂದ್ರ ಗೌಡ  ಸಂಭಾಷಣೆ, ಹಾಗೂ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular