HomeEntertainmentಸೆಪ್ಟೆಂಬರ್ 12ಕ್ಕೆ ಬಿಡುಗಡೆಯಾಗಲಿದೆ 'ಅಂಶು' ಚಿತ್ರದ ಟ್ರೈಲರ್

ಸೆಪ್ಟೆಂಬರ್ 12ಕ್ಕೆ ಬಿಡುಗಡೆಯಾಗಲಿದೆ ‘ಅಂಶು’ ಚಿತ್ರದ ಟ್ರೈಲರ್

ಎಂಸಿ ಚನ್ನಕೇಶವ ನಿರ್ದೇಶನದ ನಿಶಾ ರವಿಕೃಷ್ಣನ್ ಅಭಿನಯದ ‘ಅಂಶು’ ಚಿತ್ರದ ಟ್ರೈಲರ್ ಇದೆ ಸೆಪ್ಟೆಂಬರ್ 12ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಎಸ್ ಟಿ ಜೋಸೆಫ್ ಯೂನಿವರ್ಸಿಟಿ ಯಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಕಾರ್ಯಕ್ರಮವಿದ್ದು, ಹಲವಾರು ಅತಿಥಿಗಳು ಆಗಮಿಸಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಮಹಿಳಾ ಪ್ರಧಾನ  ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗ್ರಹಣ lip ಸಂಸ್ಥೆ ನಿರ್ಮಾಣ ಮಾಡಿದ್ದು, c.ಬಾಲ ಸಾರಂಗನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಎಂಸಿ ಚನ್ನಕೇಶವ ಹಾಗೂ ರಿಕ್ಕಿ ಮಾರ್ಟಿನ್ ಅವರ ಸಂಕಲನ, ಮಹೇಂದ್ರ ಗೌಡ ಸಂಭಾಷಣೆ, ಅದಿತಿ ನಾರಾಯಣ್ ನೃತ್ಯ ನಿರ್ದೇಶನ, ಸುನಿಲ್ ನರಸಿಂಹಮೂರ್ತಿ  ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular