HomeEntertainmentರಿಲೀಸ್ ಆಯ್ತು ವಿನೋದ್ ಪ್ರಭಾಕರ್ ನಟನೆಯ 'ನೆಲ್ಸನ್' ಚಿತ್ರದ ಟೀಸರ್

ರಿಲೀಸ್ ಆಯ್ತು ವಿನೋದ್ ಪ್ರಭಾಕರ್ ನಟನೆಯ ‘ನೆಲ್ಸನ್’ ಚಿತ್ರದ ಟೀಸರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿದೆ. ಅವರ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ‘ನೆಲ್ಸನ್’ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದ್ದು, ಕೊನೆಯ ಹಂತದಲ್ಲಿದೆ.

ಚಿತ್ರತಂಡ ನಿನ್ನೆ ಟೀಸರ್ ಬಿಡುಗಡೆ ಮಾಡಿದ್ದು, ಭರ್ಜರಿ ವೀಕ್ಷಣೆ ಪಡೆದಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರುಣ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ದೀಪ ಫಿಲಂ ಬ್ಯಾನರ್ ನಡಿ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡಿದ್ದಾರೆ. ಭರತ್ ಸಂಗೀತ ಸಂಯೋಜನೆ ನೀಡಿದ್ದು, ಪ್ರಜ್ವಲ್ ಗೌಡ ಅವರ ಛಾಯಾಗ್ರಹಣ ವಿಜಯರಾಜ್ ಸಂಕಲನವಿದೆ. ಹರಿ ಡೈಲಾಗ್ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular