HomeLive Newsದಕ್ಷಿಣ ಆಫ್ರಿಕಾ - ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ ನಾಳೆಯಿಂದ ಶುರು

ದಕ್ಷಿಣ ಆಫ್ರಿಕಾ – ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ ನಾಳೆಯಿಂದ ಶುರು

ಇತ್ತೀಚಿಗಷ್ಟೇ ನಡೆದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಕಳಪೆ ಪ್ರದರ್ಶನದಿಂದ ಅಫ್ಘಾನಿಸ್ತಾನದ ಎದುರು ಮೂರು ಪಂದ್ಯಗಳಲ್ಲಿ ಎರಡು ಸೋಲು ಕಾಣುವ ಮೂಲಕ ಟೀಕೆಗೆ ಗುರಿಯಾಗಿದ್ದು, ಇದೀಗ ಐರ್ಲೆಂಡ್ ಎದುರು ನಡೆಯಲಿರುವ ಟಿ ಟ್ವೆಂಟಿ ಹಾಗೂ ಏಕದಿನ  ಸರಣಿಗೆ ಸಜ್ಜಾಗಿದೆ. ನಾಳೆ ಮೊದಲ ಟಿ 20 ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಈಗಾಗಲೇ ಅಬುಧಾಬಿಗೆ ಆಗಮಿಸಿವೆ.

ದಕ್ಷಿಣ ಆಫ್ರಿಕಾ ತಂಡ; ಏಡೆನ್ ಮಾರ್ಕ್ರಾಮ್ (ನಾಯಕ),ಜಾರ್ನ್ ಫಾರ್ಟುಯಿನ್, ರೀಜಾ ಹೆಂಡ್ರಿಕ್ಸ್, ಪ್ಯಾಟ್ರಿಕ್ ಕ್ರುಗರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಎನ್‌ಕಾಬಾ ಪೀಟರ್, ರಿಯಾನ್ ರಿಕೆಟ್‌ಕೆಲ್‌ಟನ್, ಲಿಜಾಡ್ ವಿಲಿಯಮ್ಸ್, ಆಂಡಿಲ್ ಸಿಮೆಲೇನ್, ಜೇಸನ್ ಸ್ಮಿತ್, ಟ್ರಿಸ್ಟಾನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್ಕೆ (ವಿಕೆಟ್ ಕೀಪರ್), ನಾಂಡ್ರೆ ಬರ್ಗರ್

ಐರ್ಲೆಂಡ್ ತಂಡ; ಪಾಲ್ ಸ್ಟಿರ್ಲಿಂಗ್ (ನಾಯಕ), ಫಿಯಾನ್ ಹ್ಯಾಂಡ್,  ಮ್ಯಾಥ್ಯೂ ಹಂಫ್ರೀಸ್, ಗ್ರಹಾಂ ಹ್ಯೂಮ್, ನೀಲ್ ರಾಕ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್, ಮಾರ್ಕ್ ಆಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular