HomeKarnatakaBIG NEWS: ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ಮತ್ತೊಂದು ಶಾಕ್: 'IT' ವಿಚಾರಣೆಗೆ ಹಾಜರಾದ 'ಕಾಟೇರ’

BIG NEWS: ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ಮತ್ತೊಂದು ಶಾಕ್: ‘IT’ ವಿಚಾರಣೆಗೆ ಹಾಜರಾದ ‘ಕಾಟೇರ’

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ನಿರೀಕ್ಷೆಯಲ್ಲಿರುವಾಗಲೇ ಐಟಿ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ.

ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ ಜಾಮೀನು ಕುರಿತ ಆದೇಶ ಸೆ.29ರಂದು ಹೊರಬೀಳಲಿದೆ. ಈ ನಡುವೆ ದರ್ಶನ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಎಂಟ್ರಿಕೊಟ್ಟಿದ್ದು, ದರ್ಶನ್ ವಿಚಾರಣೆ ನಡೆಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ ಹಣ, ದರ್ಶನ್ ಮನೆ ಮಹಜರಿನ ವೇಳೆ ಸಿಕ್ಕ ನಗದು ಹಣ ಸೇರಿದಂತೆ ಇನ್ನಿತರ ವಿಚಾರಗಳಿಗಾಗಿ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆಗೆ ಬಳ್ಳಾರಿ ಜೈಲಿಗೆ ಬಂದಿದ್ದು, ನಟ ದರ್ಶನ್ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular