HomeEntertainmentಮಹಾರಾಜ ಟ್ರೋಫಿ; ಇಂದು ನಡೆಯಲಿದೆ ಮೈಸೂರ್ ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವಣ ಎರಡನೇ ಸೆಮಿ...

ಮಹಾರಾಜ ಟ್ರೋಫಿ; ಇಂದು ನಡೆಯಲಿದೆ ಮೈಸೂರ್ ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವಣ ಎರಡನೇ ಸೆಮಿ ಫೈನಲ್

ನಿನ್ನೆ ನಡೆದ ಮಹಾರಾಜ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗುಲ್ಬರ್ಗ ಮೈಸ್ಟಿಕ್ಸ್ ಎದುರು ಒಂಬತ್ತು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಕೇವಲ 155 ರನ್ ಗಳ ಸಾಧಾರಣ ಗುರಿ  ಬೆನ್ನೆತ್ತಿದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಕೇವಲ ಒಂದು ವಿಕೆಟ್  ಕಳೆದುಕೊಳ್ಳುವ ಮೂಲಕ 17.1 ಓವರ್ನಲ್ಲೇ ಜಯಭೇರಿ  ಸಾಧಿಸಿದೆ.

ಇಂದು ಮಹಾರಾಜ ಟ್ರೋಫಿಯ ಎರಡನೇ ಸೆಮಿ ಫೈನಲ್ ನಡೆಯುತ್ತಿದ್ದು, ಕರುಣ್ ನಾಯರ್ ನಾಯಕತ್ವದ ಮೈಸೂರ್ ವಾರಿಯರ್ಸ್ ಮತ್ತು ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ಕಾದಾಡಲು ಸಜ್ಜಾಗಿವೆ. ಉಭಯ ತಂಡಗಳಿಗೂ ಬಹು ಮುಖ್ಯವಾದ ಪಂದ್ಯವಾಗಿದ್ದು, ಇಂದು ಗೆದ್ದ ತಂಡ ನಾಳೆ ಫೈನಲ್ ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಎದುರು ಮುಖಾಮುಖಿಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular