
ಬೆಂಗಳೂರಿನಲ್ಲೇ ಬರೋಬ್ಬರಿ 43 ಮಂದಿಗೆ ಪಟಾಕಿ ಸಿಡಿದಿದ್ದು, ಹಲವರನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಟಾಕಿ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ. 43 ಮಂದಿ ಪೈಕಿ 23 ಮಕ್ಕಳಿಗೆ ಗಾಯಗಳಾಗಿದೆ.ಈ ಪೈಕಿ 10 ಮಂದಿ ಕಣ್ಣಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಪಟಾಕಿ ಹಚ್ಚಲು ಹೋಗಿ ಕೆಲವರು ಗಾಯಗೊಂಡಿದ್ದರೆ, ಇನ್ನೂ ಕೆಲವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಣ್ಣಿಗೆ ಪಟಾಕಿ ಸಿಡಿದು ಗಾಯಗೊಂಡಿದ್ದಾರೆ.

