HomeEntertainmentಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ 'ಲವ್' ಸಿನಿಮಾ

ಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ ‘ಲವ್’ ಸಿನಿಮಾ

ಮಹೇಶ ಸಿ ಅಮ್ಮಲಿದೊಡ್ಡಿ ನಿರ್ದೇಶನದ ಪ್ರಜಯ್ ಜೈರಾಮ್ ಅಭಿನಯದ ಬಹು ನಿರೀಕ್ಷಿತ ‘ಲವ್’ ಸಿನಿಮಾ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಲೇ ಇದೆ.

ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಹಾಡು ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ. ತನ್ನ ಶೀರ್ಷಿಕೆ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಮತ್ತೊಂದು ಅಪ್ಡೇಟ್ ಇಂದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ ಪ್ರಜಯ್ ಜಯರಾಮ್ ಗೆ ಜೋಡಿಯಾಗಿ ರುಷ ಪಾಟೀಲ್ ಅಭಿನಯಿಸಿದ್ದು, ಶ್ರೀ ಕಾಲಭೈರವ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್ ಎಸ್ ನಿರ್ಮಾಣ ಮಾಡಿದ್ದಾರೆ. ರೋಷಿತ್ ವಿಜಯನ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular