HomeEntertainmentಸ್ವಂತ ಫ್ಯಾಷನ್ ಬ್ರ್ಯಾಂಡ್ ಆರಂಭಿಸಲು ಸಜ್ಜಾದ ನಟಿ ಖುಷಿ ಕಪೂರ್!

ಸ್ವಂತ ಫ್ಯಾಷನ್ ಬ್ರ್ಯಾಂಡ್ ಆರಂಭಿಸಲು ಸಜ್ಜಾದ ನಟಿ ಖುಷಿ ಕಪೂರ್!

ಖುಷಿ ಕಪೂರ್ ಹೊಸ ಉದ್ಯಮದ ಹಾದಿಯಲ್ಲಿದ್ದು ಮುಂಬರುವ ದಿನಗಳಲ್ಲಿ ಸ್ವಂತ ಫ್ಯಾಷನ್ ಬ್ರ್ಯಾಂಡ್ ಆರಂಭಿಸುವ ಸುಳಿವು ನೀಡಿದ್ದಾರೆ. ನಟನೆಯ ಜತೆಗೆ ಸೌಂದರ್ಯ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು ಸಿನಿರಂಗದ ಜತೆಗೆ ಹೊಸ ಹೆಜ್ಜೆ ಇಡಲು ಸಿದ್ಧರಾಗಿದ್ದಾರೆ.

ನಟನೆ ಜತೆಗೆ ಉದ್ಯಮ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಇವರು ಇತ್ತೀಚೆಗೆ ಉದ್ಯಮಿಗಳ ಜತೆ ಕೈಜೋಡಿಸಿ ನೇಲ್ ಆರ್ಟ್ ಬ್ರ್ಯಾಂಡ್ ಒಂದನ್ನು ಸಹ-ಸ್ಥಾಪಿಸಿದ್ದಾರೆ. ತಮಗೆ ಇಷ್ಟವಾದ ಡಿಸೈನ್ ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದ ಕಾರಣ ಸ್ವತಃ ತಾವೇ ಈ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಸಾಮಾನ್ಯ ಸಲೂನ್ ಗೆ ತೆರಳಿ ಗಂಟೆಗಟ್ಟಲೆ ಕೂರುವ ಬದಲು ಸುಲಭವಾಗಿ ಬಳಸಬಹುದಾದ ಪ್ರೆಸ್ ಆನ್ ನೇಲ್ಸ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಈ ಹೆಜ್ಜೆ ಇಡಲಾಗಿದೆ. ಉಗುರುಗಳ ವಿನ್ಯಾಸದಲ್ಲಿ ಕ್ಯಾಟ್ ಐ ಶೈಲಿ ಹಾಗೂ ಆಲ್ಮಂಡ್ ಆಕಾರದ ಉಗುರುಗಳು ತಮ್ಮ ಅಚ್ಚುಮೆಚ್ಚು ಎಂದು ಅವರು ತಿಳಿಸಿದ್ದಾರೆ.

ಬ್ಯೂಟಿ ಜಗತ್ತಿನಲ್ಲಿ ಹೊಸ ಪ್ರಯೋಗಗಳನ್ನು ಇಷ್ಟಪಡುವ ಇವರು ಚರ್ಮದ ಆರೈಕೆಯ ವಿಚಾರದಲ್ಲಿ ಮಾತ್ರ ಸರಳತೆಯನ್ನು ಕಾಯ್ದುಕೊಳ್ಳುತ್ತಾರೆ. ಸೂಕ್ಷ್ಮ ಚರ್ಮ ಹೊಂದಿರುವುದರಿಂದ ಮೈಗೆ ಹೆಚ್ಚಿನ ರಾಸಾಯನಿಕ ಪದಾರ್ಥಗಳನ್ನು ಹಚ್ಚಿಕೊಳ್ಳುವುದಿಲ್ಲ. ದಿನನಿತ್ಯದ ಬಳಕೆಯಲ್ಲಿ ಕೇವಲ ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಮುಖದ ಅಂದ ಹೆಚ್ಚಿಸಲು ಸಹೋದರಿ ಜಾಹ್ನವಿ ಕಪೂರ್ ಅವರಿಂದ ಪ್ರೇರಿತರಾಗಿ ಬೆಳಗಿನ ಜಾವ ಮುಖಕ್ಕೆ ಐಸ್ ಮಸಾಜ್ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಆದರೆ ಚರ್ಮದ ಮೇಲಿನ ತೀವ್ರತರವಾದ ಲೇಸರ್ ಚಿಕಿತ್ಸೆಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌಂದರ್ಯ ಉತ್ಪನ್ನಗಳ ವ್ಯವಹಾರ ಯಶಸ್ವಿಯಾದ ಬಳಿಕ ಮುಂದಿನ ಹಂತದಲ್ಲಿ ಸ್ವಂತದ ಫ್ಯಾಷನ್ ಲೇಲ್ಯಾಂಡ್ ಆರಂಭಿಸುವ ಕನಸು ಹೊಂದಿದ್ದಾರೆ. ಈಗಾಗಲೇ ತಮ್ಮ ನೋಟ್ ಬುಕ್ ನಲ್ಲಿ ಹಲವು ಹೊಸ ಬಟ್ಟೆಗಳ ವಿನ್ಯಾಸಗಳನ್ನು ಬರೆದಿಟ್ಟುಕೊಂಡಿದ್ದು ತಮಗೆ ಬೇಕಾದ ಡಿಸೈನ್ ಗಳನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಾರೆ. ಸಿನಿರಂಗದ ಬಿಡುವಿನ ವೇಳೆಯಲ್ಲಿ ಉದ್ಯಮಶೀಲತೆ ಹಾಗೂ ಫ್ಯಾಷನ್ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲು ಅವರು ಉತ್ಸುಕರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular