HomeEntertainmentಬಿಡುಗಡೆಯಾಯ್ತು 'ತಾಜ್' ಚಿತ್ರದ ಮೆಲೋಡಿ ಗೀತೆ

ಬಿಡುಗಡೆಯಾಯ್ತು ‘ತಾಜ್’ ಚಿತ್ರದ ಮೆಲೋಡಿ ಗೀತೆ

ಷಣ್ಮುಖ ಜೈ ಅಭಿನಯದ ‘ತಾಜ್’ ಚಿತ್ರದ ಮೆಲೋಡಿ ಗೀತೆ ಯೊಂದನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಏನೆಂದು ಹೇಳಲಿ” ಎಂಬ ಈ ಹಾಡಿಗೆ ಸತೀಶ್ ಆರ್ಯನ್ ಮತ್ತು ನಂದಿತಾ ಧ್ವನಿಯಾಗಿದ್ದು, ಜೆಸ್ಸಿ ಗಿಫ್ಟ್ ಅವರ ಸಂಗೀತ, ಬಿ ರಾಜರತ್ನ ಸಾಹಿತ್ಯವಿದೆ.

ರಾಜರತ್ನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಷಣ್ಮುಖ ಜೈ ಹಾಗೂ ಅಪ್ಸರಾ ಮುಖ್ಯ  ಭೂಮಿಕೆಯಲ್ಲಿದ್ದು, ಪದ್ಮಾ ವಸಂತಿ, ಶೋಬರಾಜ್, ಬಾಲರಾಜ್ ವಾಡಿ,  ನಾಗರಾಜ್, ವರ್ಧನ್, ಸೂರಜ್, ಕಡ್ಡಿ ವಿಶ್ವ, ಮೈಸೂರು ಜಗದೀಶ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಡ್ಸ್ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮಿ ಷಣ್ಮುಖ ಮತ್ತು ಯರಂಗಳ್ಳಿ ಮರಿಯಮ್ಮ ನಿರ್ಮಾಣ ಮಾಡಿದ್ದಾರೆ. ಶ್ರೀ ಜವಳಿ ಸಂಕಲನ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ, ಜೈ ಆರ್ಯ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular