HomeEntertainment'ನಾ ನಿನ್ನ ಬಿಡಲಾರೆ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ನಾ ನಿನ್ನ ಬಿಡಲಾರೆ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ನವೀನ್ ಜಿಎಸ್ ನಿರ್ದೇಶನದ ಅಂಬಲಿ ಭಾರತಿ ಹಾಗೂ ಪಂಚಿ ಅಭಿನಯದ ‘ನಾ ನಿನ್ನ ಬಿಡಲಾರೆ’ ಚಿತ್ರದ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ”ಮುದ್ದು ಗೊಂಬೆ” ಎಂಬ ಈ ಹಾಡಿಗೆ ಅನಿರುದ್ಧ ಶಾಸ್ತ್ರಿ ಧ್ವನಿಯಾಗಿದ್ದು, ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಮನೋಜ್ ಸವ್ಗಂದ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಭಾರತಿ ಬಾಲಿ ನಿರ್ಮಾಣ ಮಾಡಿದ್ದು, ಅಂಬಲಿ ಭಾರತಿ ಹಾಗೂ ಪಂಚಿ ಸೇರಿದಂತೆ ಕೆ ಎಸ್ ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಸೀರುಂಡೆ ರಘು, ಮಹಾಂತೇಶ್, ಲಕ್ಷ್ಮಿ ಸಿದ್ದಯ್ಯ, ಮಂಜುಳಾ ರೆಡ್ಡಿ, ನಾಗರಾಜ್ ರಾವ್ ತೆರೆ ಹಂಚಿಕೊಂಡಿದ್ದಾರೆ. ದೀಪಕ್ ಸಿಎಸ್ ಸಂಕಲನ, ಡಿಫರೆಂಟ್ ಡ್ಯಾನಿ, ನರಸಿಂಹ ಅವರ ಸಾಹಸ ನಿರ್ದೇಶನ, ಹಾಗೂ ವೀರೇಶ್  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular