HomeEntertainmentಸಿದ್ಧಾರ್ಥ್ ಮಲ್ಹೋತ್ರಾ-ತಮನ್ನಾ ಭಾಟಿಯಾ ಲಿಪ್‌ಲಾಕ್ ವಿಡಿಯೋ ವೈರಲ್: ನೆಟ್ಟಿಗರ ಸೋಷಿಯಲ್ ಮೀಡಿಯಾ ತನಿಖೆಯಲ್ಲಿ ಸತ್ಯ ಬಹಿರಂಗ!

ಸಿದ್ಧಾರ್ಥ್ ಮಲ್ಹೋತ್ರಾ-ತಮನ್ನಾ ಭಾಟಿಯಾ ಲಿಪ್‌ಲಾಕ್ ವಿಡಿಯೋ ವೈರಲ್: ನೆಟ್ಟಿಗರ ಸೋಷಿಯಲ್ ಮೀಡಿಯಾ ತನಿಖೆಯಲ್ಲಿ ಸತ್ಯ ಬಹಿರಂಗ!

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅಭಿನಯದ ‘ದಿ ವಾನ್’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದ್ದು, ಈ ಚಿತ್ರದ ಮೊದಲ ಹಾಡಿನ ಪ್ರೊಮೊ ಬಿಡುಗಡೆಯಾಗಿ ಸೌಂಡ್ ಮಾಡುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ಧಾರ್ಥ್ ಮತ್ತು ತಮನ್ನಾ ಪರಸ್ಪರ ಕಿಸ್ ಮಾಡುತ್ತಿರುವಂತೆ ಕಾಣಿಸುವ ವೀಡಿಯೊವೊಂದು ಭಾರಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಇದು ಚಿತ್ರದ ದೃಶ್ಯವೇ ಅಥವಾ ನಿಜವೇ ಎಂಬ ಚರ್ಚೆ ಶುರುವಾಗಿತ್ತು.

ಆದರೆ ಈ ವೈರಲ್ ವಿಡಿಯೋದ ಬೆನ್ನಿಹಿಂದಿರುವ ನಿಜವಾದ ಸತ್ಯ ಇದೀಗ ಹೊರಬಿದ್ದಿದೆ. ಇದು ನಿಜವಾದ ವಿಡಿಯೋ ಅಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ ಅಂದರೆ ಎಐ ತಂತ್ರಜ್ಞಾನ ಬಳಸಿ ಗಿಫ್ಟ್ ಮಾಡಲಾದ ನಕಲಿ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಗ್ರೋಕ್ ಎಐ ಲೋಗೋ ಈ ವಿಡಿಯೋ ಮೇಲಿರುವುದನ್ನು ಗಮನಿಸಿದ ಜಾಲತಾಣ ಬಳಕೆದಾರರು, ಇದು ತಂತ್ರಜ್ಞಾನದ ದುರ್ಬಳಕೆ ಎಂದು ಕಿಡಿಕಾರಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಅವರ ಇತ್ತೀಚಿನ ಸಿನಿಮಾದ ದೃಶ್ಯಗಳಿಗೆ ಪ್ರತಿಯಾಗಿ ಸಿದ್ಧಾರ್ಥ್ ಹೀಗೆ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಕಿಡಿಗೇಡಿಗಳು ಈ ರೀತಿ ಎಐ ವಿಡಿಯೋ ಸೃಷ್ಟಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಟ ಸಿದ್ಧಾರ್ಥ್ ಮಲ್ಹೋತ್ರಾ ಆಗಲಿ ಅಥವಾ ನಟಿ ತಮನ್ನಾ ಭಾಟಿಯಾ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇನ್ನು ‘ದಿ ವಾನ್’ ಸಿನಿಮಾವು ಬರುವ ಸೆಪ್ಟೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದ್ದು, ಅಭಿಮಾನಿಗಳು ಈ ಜೋಡಿಯ ಹೊಸ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular