HomeCrimeರಸ್ತೆ ಮಧ್ಯೆ ಕಾರ್ ನಿಲ್ಲಿಸಿ ಪತ್ನಿಯನ್ನು ಕೆಳಗಿಳಿಸಿದ ಪತಿ; ಇದರ ಹಿಂದಿದೆ ಶಾಕಿಂಗ್ ಕಾರಣ....!

ರಸ್ತೆ ಮಧ್ಯೆ ಕಾರ್ ನಿಲ್ಲಿಸಿ ಪತ್ನಿಯನ್ನು ಕೆಳಗಿಳಿಸಿದ ಪತಿ; ಇದರ ಹಿಂದಿದೆ ಶಾಕಿಂಗ್ ಕಾರಣ….!

ಯುಪಿಯ ಫಿರೋಜಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾನೆ. ಕಾರಿನಲ್ಲಿ ಮಗನ ಜೊತೆ ಬಂದ ವ್ಯಕ್ತಿ, ಮಧ್ಯ ದಾರಿಯಲ್ಲಿ ಕಾರ್‌ ನಿಲ್ಲಿಸಿ, ನಿನಗೆ ನನ್ನ ಕಾರ್‌ ನಲ್ಲಿ ಕುಳಿತುಕೊಳ್ಳುವ ಯೋಗ್ಯತೆಯಿಲ್ಲ ಎಂದು ನಿಂದಿಸಿ ಅಲ್ಲಿಂದ ತೆರಳಿದ್ದಾನೆ.

ಮಹಿಳೆ ಅಲ್ಲಿಂದ ತನ್ನ ಅತ್ತಿಗೆ ಮನೆಗೆ ಹೋಗಿದ್ದಾಳೆ. ಆದ್ರೆ ಅಲ್ಲೂ ಆಕೆಯನ್ನು ಹೊರಗೆ ಹಾಕಲಾಗಿದೆ. ಸಂತ್ರಸ್ತೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ನಗರದ ಕುಲೇಸರ ನಿವಾಸಿ ಮುಖೇಶ್ ಸೋಲಂಕಿ ಅವರ ಪುತ್ರ ವಿಕಾಸ್ ಸೋಲಂಕಿಯನ್ನು ಫೆಬ್ರವರಿ 2020 ರಲ್ಲಿ ಮಹಿಳೆ ಮದುವೆಯಾಗಿದ್ದಳು. ಮದುವೆಗೆ 12 ಲಕ್ಷ ಖರ್ಚು ಮಾಡಿದರೂ ಅತ್ತೆಗೆ ಸಮಾಧಾನವಾಗಲಿಲ್ಲ. ಬೈಕು ಮತ್ತು ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಅದನ್ನು ನೀಡದೆ ಹೋದಾಗ ಸೊಸೆಗೆ ಕಿರಕುಳು ಶುರು ಮಾಡಿದ್ದಾಳೆ. ವಿಕಾಸ್‌ ಸೋಲಂಕಿ ಕೂಡ ಹಿಂಸೆ ನೀಡ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಮಯದಲ್ಲಿ ವಿಕಾಸ್‌, ಪತ್ನಿಯನ್ನು ಹೆದ್ದಾರಿ ಮಧ್ಯೆ ಬಿಟ್ಟು ಹೋಗಿದ್ದಾನೆ. ಮಗನನ್ನ ತನ್ನ ಜೊತೆ ಕರೆದುಕೊಂಡು ಹೋದ ವಿಕಾಸ್, ವರದಕ್ಷಿಣೆ ನೀಡುವಂತೆ ತಾಕೀತು ಮಾಡಿದ್ದ. ಪೀಡಿತೆ, ಪತಿ ವಿಕಾಸ್, ಮಾವ ಮುಖೇಶ್, ಅತ್ತೆ ಸೀಮಾದೇವಿ, ನಾದಿನಿ ಶೀತಲ್ ಭಾಟಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular