ಚಾಮರಾಜನಗರ ಜಿಲ್ಲೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಮುಳ್ಳುಹಂದಿ ಬೇಟೆಯಾಡಲು ಹೋದ ಚಿರತೆಯೊಂದು ಮುಳ್ಳಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ
ಹೌದು. ಹಸಿವಿನ ಅನ್ವೇಷಣೆಯಲ್ಲಿ ಬೇಟೆಯಾಡಲು ಹೋದ ಚಿರತೆಯೊಂದು ಮುಳ್ಳುಹಂದಿಯ ಪ್ರತಿರೋಧಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ವಿಲಕ್ಷಣ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಸಂಭವಿಸಿದೆ. ಆಹಾರಕ್ಕಾಗಿ ಮುಳ್ಳುಹಂದಿಯ ಮೇಲೆರಗಿದ ಚಿರತೆಯ ಎದೆಭಾಗಕ್ಕೆ ಹಂದಿಯ ತೀಕ್ಷ್ಣವಾದ ಮುಳ್ಳುಗಳು ಬಲವಾಗಿ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವ ಹಾಗೂ ಗಾಯಗೊಂಡ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ಹಸಿದಿದ್ದ ಚಿರತೆಯು ಆಹಾರಕ್ಕಾಗಿ ಮುಳ್ಳುಹಂದಿ ಬೇಟೆಯಾಡಲು ಪ್ರಯತ್ನಿಸಿದೆ. ಮುಳ್ಳುಹಂದಿಯ ದೇಹದಲ್ಲಿದ್ದ ಮುಳ್ಳು ಚಿರತೆಯ ಎದೆಭಾಗಕ್ಕೆ ಚುಚ್ಚಿದೆ. ಗಂಭೀರವಾಗಿ ಗಾಯಗೊಂಡ ಚಿರತೆ ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ಅಧಿಕೃತವಾಗಿ ದೃಢಪಟ್ಟಿದೆ.
ಸಾಮಾನ್ಯವಾಗಿ ಕಾಡುಪ್ರಾಣಿಗಳು ತಮ್ಮ ಆಹಾರಕ್ಕಾಗಿ ಜಿಂಕೆ ಅಥವಾ ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ ಚಿರತೆಯು ಮುಳ್ಳುಹಂದಿ ಹಿಡಿಯಲು ಹೋಗಿ ಈ ರೀತಿ ಪ್ರಾಣ ಕಳೆದುಕೊಂಡಿರುವುದು ಅಪರೂಪದ ಘಟನೆಯಾಗಿದೆ.

