HomeLive Newsನಾಳೆ ನಡೆಯಲಿದೆ ತಮಿಳುನಾಡು ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯ

ನಾಳೆ ನಡೆಯಲಿದೆ ತಮಿಳುನಾಡು ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯ

ತಮಿಳುನಾಡು ಪ್ರೀಮಿಯರ್ ಲೀಗ್ ಇನ್ನೇನು ಅಂತಿಮ ಘಟ್ಟ ತಲುಪಿದೆ. ನಾಳೆಯಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ನಲ್ಲಿ ಬಾಬಾ ಇಂದ್ರಜಿತ್ ನಾಯಕತ್ವದ  ಲೈಕಾ ಕೋವೈ ಕಿಂಗ್ಸ್  ಹಾಗೂ ಆರ್ ಪ್ರಸನ್ನ  ನೇತೃತ್ವದ ಐಡ್ರೀಮ್ ತಿರುಪ್ಪೂರ್ ತಮಿಜಾನ್ಸ್ ಮುಖಾಮುಖಿಯಾಗುತ್ತಿವೆ.

ದಿಂಡಿಗಲ್ ನ NPR ಕಾಲೇಜು ಕ್ರೀಡಾಂಗಣದಲ್ಲಿ  ಪಂದ್ಯ ನಡೆಯುತ್ತಿದ್ದು, ಈ  ರೋಮಾಂಚನಕಾರಿ ಪಂದ್ಯವನ್ನು ನೋಡಲು ತಮಿಳುನಾಡು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಜುಲೈ 31ಕ್ಕೆ ಮತ್ತೊಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಆಗಸ್ಟ್ ನಾಲ್ಕರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ  ಫೈನಲ್   ಪಂದ್ಯವಿರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular