HomeIndiaBREAKING : 2 ಸಾವಿರ ರೂ.ನೋಟು ವಿನಿಮಯಕ್ಕೆ ಅ.31 ರವರೆಗೂ ಗಡುವು ವಿಸ್ತರಣೆ ಸಾಧ್ಯತೆ

BREAKING : 2 ಸಾವಿರ ರೂ.ನೋಟು ವಿನಿಮಯಕ್ಕೆ ಅ.31 ರವರೆಗೂ ಗಡುವು ವಿಸ್ತರಣೆ ಸಾಧ್ಯತೆ

ನವದೆಹಲಿ : 2 ಸಾವಿರ ರೂ ನೋಟು ವಿನಿಮಯಕ್ಕೆ ಸೆ.30 ನಾಳೆ ಕೊನೆಯ ದಿನಾಂಕವಾಗಿದೆ. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಅಕ್ಟೋಬರ್ 31 ರವರೆಗೂ ಈ ಗಡುವು ವಿಸ್ತರಣೆಯಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಆರ್ ಬಿ ಐ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ.

ಆರ್ಬಿಐ ಮಾಹಿತಿಯ ಪ್ರಕಾರ ಜನಸಾಮಾನ್ಯರ ಬಳಿ ಇರುವ ಸುಮಾರು 24,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿಲ್ಲ. ಆದ್ದರಿಂದ 2000 ರೂ ನೋಟು ವಿನಿಮಯ ಮಾಡಲು ಹೆಚ್ಚಿನ ಕಾಲಾಕಾಶ ಬೇಕಾಗಬಹುದು. ಹೀಗಾಗಿ, ಆರ್ಬಿಐ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ನಿರ್ಧರಿಸಿರಬಹುದು ಎಂದು ಹೇಳಲಾಗಿದೆ. ಮನಿಕಂಟ್ರೋಲ್ ತನ್ನ ಅಧಿಕೃತ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 19 ಮೇ 2023 ರಂದು 2000 ರೂಪಾಯಿ ಮುಖಬೆಲೆ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. RBI ಪ್ರಕಾರ, ಮಾರ್ಚ್ 31, 2023 ರವರೆಗೆ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಇದು ಮೇ 19, 2023 ರಂದು 3.56 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ 1 ರಂದು, ಆರ್ಬಿಐ ನೋಟುಗಳ ವಾಪಸಾತಿಗೆ ಸಂಬಂಧಿಸಿದ ಡೇಟಾವನ್ನು ಬಿಡುಗಡೆ ಮಾಡಿತ್ತು. ಈ ವೇಳೆ 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದವು. ಅಂದರೆ ಚಲಾವಣೆಯಲ್ಲಿದ್ದ ಒಟ್ಟು ನೋಟುಗಳಲ್ಲಿ ಶೇ.93 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಇದರ ಹೊರತಾಗಿಯೂ ಶೇಕಡಾ 7ರಷ್ಟು ಅಂದರೆ 24,000 ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಇನ್ನೂ ವಾಪಸಾಗಿಲ್ಲ. 2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಸಮಯದಲ್ಲಿ, ಸೆಪ್ಟೆಂಬರ್ 30, 2023 ರ ನಂತರವೂ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಉಳಿಯುತ್ತವೆ ಎಂದು ಆರ್ಬಿಐ ಹೇಳಿತ್ತು.

2000 ರೂ ನೋಟು ವಿನಿಮಯ ಮಾಡಿಕೊಳ್ಳಲು ಗಡುವು ವಿಸ್ತರಿಸುವ ಬಗ್ಗೆ ಆರ್ ಬಿ ಐ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular