HomeCrime'ಲವ್ ಮ್ಯಾರೇಜ್' ಮಾಡ್ಕೊಂಡ ಮಗಳು : ಸೇಡು ತೀರಿಸಿಕೊಳ್ಳಲು ಹುಡುಗನ ಸಹೋದರಿ ಮೇಲೆ ಅತ್ಯಾಚಾರವೆಸಗಿದ ತಂದೆ....!

‘ಲವ್ ಮ್ಯಾರೇಜ್’ ಮಾಡ್ಕೊಂಡ ಮಗಳು : ಸೇಡು ತೀರಿಸಿಕೊಳ್ಳಲು ಹುಡುಗನ ಸಹೋದರಿ ಮೇಲೆ ಅತ್ಯಾಚಾರವೆಸಗಿದ ತಂದೆ….!

ಪಂಜಾಬ್ ನ ಲೂಧಿಯಾನದಲ್ಲಿ ಗ್ಯಾಂಗ್‌ ರೇಪ್‌ ಒಂದು ತಡವಾಗಿ ಬೆಳಕಿಗೆ ಬಂದಿದೆ. ಮಗಳು ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಮಗಳ ತಂದೆ ಕ್ರೂರ ಕೃತ್ಯವೆಸಗಿದ್ದಾನೆ. ಮಗಳ ಪ್ರೇಮಿಯ ಸಹೋದರಿ ಮೇಲೆ ಸಾಮೂಹಿಕ ಅತ್ಯಾಚಾರವನ್ನೆಸಗಿದ್ದಾನೆ.

ವರೀಂದರ್ ಸಿಂಗ್ ಮಗಳು ಲಕ್ನೋದ ಹುಡುಗನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಇದಕ್ಕೆ ಒಪ್ಪಿಗೆ ಇರಲಿಲ್ಲ. ಬೇರೆ ವ್ಯಕ್ತಿ ಜೊತೆ ತಂದೆ ಮದುವೆ ಬಗ್ಗೆ ಚರ್ಚಿಸುತ್ತಿದ್ದ ಕಾರಣ ಆಕೆ, ಲಕ್ನೋ ಹುಡುಗನ ಜೊತೆ ಓಡಿ ಹೋಗಿ ಮದುವೆ ಆಗಿದ್ದಾಳೆ. ಆತನ ಸಹೋದರಿ ಲೂಧಿಯಾನದಲ್ಲಿದ್ದಳು. ಆಕೆ ಹಾಗೂ ಆಕೆ ಪತಿ ಲೂಧಿಯಾನಾದಲ್ಲಿದ್ದು, ಅವರ ಮನೆಗೆ ಬಂದ ವರೀಂದರ್‌ ಸಿಂಗ್‌ ಈ ಕೃತ್ಯವೆಸಗಿದ್ದಾನೆ.

ವರೀಂದರ್ ಸಿಂಗ್, ಮಗ ಅಮನ್ ಸಿಂಗ್ ಮತ್ತು ಇನ್ನೊಬ್ಬ ಸಹೋದರ ಸಂತೋಷ್ ಸಿಂಗ್, ಲೂದಿಯಾನದ ಸಂತ್ರಸ್ತೆ ಮನೆಗೆ ಬಂದಿದ್ದಾರೆ. ವರೀಂದರ್‌ ಸಿಂಗ್‌ ಅಲ್ಲಿ ತನ್ನ ಮಗಳನ್ನು ಹುಡುಕಿದ್ದಾನೆ. ಮಗಳ ಗಂಡನ ಬಗ್ಗೆ ಕೇಳಿದ್ದಾರೆ. ಆದ್ರೆ ಸಂತ್ರಸ್ತೆಗೆ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಆಕೆ ಪತಿ ಕೂಡ ಮನೆಯಲ್ಲಿ ಇರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಅಲ್ಲಿ ಮಾತಿನ ಚಕಮಕಿ ನಡೆದಿದೆ. ನಂತ್ರ ಸಂತ್ರಸ್ತೆಯನ್ನು  ಮೂವರು ಅತ್ಯಾಚಾರವೆಸಗಿದ್ದಾರೆ. ಇದ್ರ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದಾರೆ. ಕೆಲ ದಿನ ಸುಮ್ಮನಿದ್ದ ಸಂತ್ರಸ್ತೆ ನಂತ್ರ ಸತ್ಯವನ್ನು ಪತಿಗೆ ತಿಳಿಸಿದ್ದಾಳೆ. ಈಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular