HomeLatest Newsಖದೀಮರ ಎದೆಗಾರಿಕೆ : ಬೆಂಗಳೂರು 'ಪೊಲೀಸ್ ಕಮಿಷನರ್' ಹೆಸರಲ್ಲೇ ನಕಲಿ ಫೇಸ್‌'ಬುಕ್ ಖಾತೆ .!

ಖದೀಮರ ಎದೆಗಾರಿಕೆ : ಬೆಂಗಳೂರು ‘ಪೊಲೀಸ್ ಕಮಿಷನರ್’ ಹೆಸರಲ್ಲೇ ನಕಲಿ ಫೇಸ್‌’ಬುಕ್ ಖಾತೆ .!

ಬೆಂಗಳೂರು :  ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರನ್ನು ಬಳಸಿಕೊಂಡು ಸೈಬರ್ ಕಳ್ಳರು ವಂಚನೆ ಎಸಗಲು ಯತ್ನಿಸಿದ ಘಟನೆ ನಡೆದಿದೆ.  ಹೌದು,  ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ಹೆಸರಿನಲ್ಲಿ ವಂಚಕರು ನಕಲಿ ಫೇಸ್‌ಬುಕ್ (Facebook) ಖಾತೆಯನ್ನು ತೆರೆದಿದ್ದಾರೆ.

:ಈ ನಕಲಿ ಖಾತೆಯಲ್ಲಿ ಆಯುಕ್ತರು ಗಣ್ಯರೊಂದಿಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅದು ಅಸಲಿ ಖಾತೆಯೆಂದು ಜನರನ್ನು ನಂಬಿಸಲು ಯತ್ನಿಸಲಾಗಿದೆ. ಖಾತೆಯಲ್ಲಿ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಲಾಗಿದೆ.ಈ ಖಾತೆಯನ್ನು ನಂಬಿ ಮೆಸೇಜ್ ಮಾಡಿದವರಿಗೆ ಅಥವಾ ಸಂಪರ್ಕಕ್ಕೆ ಬಂದವರಿಗೆ ಖಾಸಗಿ ಸಂದೇಶದ (Messenger) ಮೂಲಕ ಹಣದ ಬೇಡಿಕೆ ಇಡಲಾಗಿದೆ ಎಂದು ವರದಿಯಾಗಿದೆ.ಈ ಹಿಂದೆ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಭೀಮಾಶಂಕರ್ ಗುಳೇದ್ ಅವರ ಹೆಸರಿನಲ್ಲಿಯೂ ಇದೇ ರೀತಿಯ ನಕಲಿ ಖಾತೆಗಳನ್ನು ತೆರೆದು ವಂಚಿಸಲು ಯತ್ನಿಸಲಾಗಿತ್ತು.

ಪೊಲೀಸ್ ಕ್ರಮ: ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕರಿಗೆ ಸೂಚನೆ: ಯಾವುದೇ ಗಣ್ಯ ವ್ಯಕ್ತಿಗಳು ಅಥವಾ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಣದ ಬೇಡಿಕೆ ಬಂದರೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಅಂತಹ ಖಾತೆಗಳ ಅಧಿಕೃತತೆಯನ್ನು ಪರಿಶೀಲಿಸದೆ ಯಾವುದೇ ಹಣಕಾಸಿನ ವಹಿವಾಟು ನಡೆಸಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular