HomeEntertainmentರಿಲೀಸ್ ಆಯ್ತು 'ಬ್ಯೂಟಿ' ಆಲ್ಬಮ್ ಹಾಡು

ರಿಲೀಸ್ ಆಯ್ತು ‘ಬ್ಯೂಟಿ’ ಆಲ್ಬಮ್ ಹಾಡು

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಮೇಘನಾ ಕುಲಕರ್ಣಿ ಧ್ವನಿಯಲ್ಲಿ ಮೂಡಿ ಬಂದಿರುವ  ‘ಬ್ಯೂಟಿ’ ಎಂಬ ಮೆಲೋಡಿ ಆಲ್ಬಮ್ ಹಾಡು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ.  ಸಂಜಯ್ ಎಂ.ವಿ. ಈ ಹಾಡಿಗೆ ಸಂಗೀತ ಸಂಯೋಜನೆ ನೀಡುವ ಮೂಲಕ ಸಾಹಿತ್ಯ ಬರೆದಿದ್ದಾರೆ.

ಮಹೇಶ್ ವಿಶ್ವಕರ್ಮ ನಿರ್ದೇಶಿಸಿದ್ದು, ರಾವಣ್ ಹಾಗೂ ‘ಲವ್ 360’ ಖ್ಯಾತಿಯ ನಟಿ ರಚನಾ ಇಂದರ್ ಈ ಹಾಡಿನ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಮೇಶ್ ಆರ್ ಬಿ  ಸಂಕಲನ, ಐಸಾಕ್ ಪಿ ಛಾಯಾಗ್ರಹಣ ಹಾಗೂ ಚಂದನ್ ಪಿ ನೃತ್ಯ ನಿರ್ದೇಶನವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular