HomeKarnatakaವಿದ್ಯಾರ್ಥಿಗಳು, ಪೋಷಕರಿಗೆ ಶಾಕ್: ಪಠ್ಯಪುಸ್ತಕಗಳ ದರ ಶೇ. 50ರವರೆಗೆ ಹೆಚ್ಚಳ

ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್: ಪಠ್ಯಪುಸ್ತಕಗಳ ದರ ಶೇ. 50ರವರೆಗೆ ಹೆಚ್ಚಳ

ಬೆಂಗಳೂರು: 2026- 27ನೇ ಶೈಕ್ಷಣಿಕ ಸಾಲಿನ ಶಾಲಾ ಪಠ್ಯಪುಸ್ತಕಗಳ ಬೆಲೆಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘ ಹೆಚ್ಚಳ ಮಾಡಿದ್ದು, ಕೆಲವು ಪುಸ್ತಕಗಳ ಬೆಲೆಯಲ್ಲಿ ಶೇಕಡ 50ರವರೆಗೆ ಹೆಚ್ಚಳ ಆಗಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆ ಇತ್ತೀಚಿಗೆ ಸೂಚನೆ ನೀಡಿತ್ತು. ಸೂಚನಾ ಪತ್ರದಲ್ಲಿ ನಮೂದಿಸಿದ ಪ್ರಕಾರ ಕೆಲವು ಪುಸ್ತಕಗಳ ಬೆಲೆ ಹೆಚ್ಚಳ ಮಾಡಲಾಗಿದೆ.

ಮೂರನೇ ತರಗತಿ ಪರಿಸರ ಅಧ್ಯಯನ ಪುಸ್ತಕದ ದರ 22 ರಿಂದ 45 ರೂ.ಗೆ ಹೆಚ್ಚಳವಾಗಿದೆ. ಎರಡನೇ ತರಗತಿಯ ಗಣಿತ(ಇಂಗ್ಲಿಷ್ ಭಾಗ-2) ಪಠ್ಯ ಪುಸ್ತಕ ದರ 25 ರಿಂದ 51 ರೂ.ಗೆ ಹೆಚ್ಚಳವಾಗಿದೆ. ಒಂದರಿಂದ ಐದನೇ ತರಗತಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ವಿಷಯಗಳ ಪಠ್ಯಪುಸ್ತಕಗಳ ದರವನ್ನು ಎಲ್ಲಾ ಹಂತಗಳಲ್ಲೂ ಹೆಚ್ಚಳ ಮಾಡಲಾಗಿದೆ. ನಾಲ್ಕನೇ ತರಗತಿಯ ಪುಸ್ತಕದ ದರ 31 ರಿಂದ 51 ರೂ.ಗೆ, ಒಂದನೇ ತರಗತಿಯ ಮೃದಂಗ ಪುಸ್ತಕ ದರ 42 ರಿಂದ 60 ರೂ.ಗೆ ಏರಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಠ್ಯಪುಸ್ತಕಗಳ ದರ ಹೆಚ್ಚಳಕ್ಕೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಮೊದಲೇ ಹೊಸ ದರದ ಪಟ್ಟಿಯನ್ನು ಸರ್ಕಾರ ಪ್ರಕಟಿಸಬೇಕಿತ್ತು. ಈಗ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಪರಿಸ್ಥಿತಿಯಲ್ಲಿ ಶಾಲೆಗಳು ಇಲ್ಲ, ಬೆಲೆ ಏರಿಕೆ ತಡೆಯಲು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular