HomeLatest NewsBREAKING : ನೀವು ಧರ್ಮ ನೋಡಿ ಹೊಡೆದ್ರಿ , ನಾವ್ ನಿಮ್ಮ ಕರ್ಮ ನೋಡಿ ಹೊಡೆದಿದ್ದೇವೆ...

BREAKING : ನೀವು ಧರ್ಮ ನೋಡಿ ಹೊಡೆದ್ರಿ , ನಾವ್ ನಿಮ್ಮ ಕರ್ಮ ನೋಡಿ ಹೊಡೆದಿದ್ದೇವೆ : ಉಗ್ರರ ವಿರುದ್ಧ ರಾಜನಾಥ್ ಸಿಂಗ್ ಗುಡುಗು |WATCH VIDEO

ಡಿಜಿಟಲ್ ಡೆಸ್ಕ್ : ಉಗ್ರರು ಧರ್ಮ ನೋಡಿ ಹೊಡೆದ್ರು, ನಾವ್ ಕರ್ಮ ನೋಡಿ ಹೊಡೆದ್ವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.

ಜಮ್ಮು ಕಾಶ್ಮೀರದ ಶ್ರೀ ನಗರದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್’ಗೆ ತೆರಳಿದ ರಕ್ಷಣಾ ಸಚಿವರು ಯೋಧರನ್ನು ಭೇಟಿಯಾಗಿ ಅವರನ್ನು ಉದ್ದೇಶಿಸಿ ಮಾತನಾಡಿದರು.

ಉಗ್ರರು ಧರ್ಮ ನೋಡಿ ಹೊಡೆದ್ರು , ನಾವ್ ಕರ್ಮ ನೋಡಿ ಮಣ್ಣಲ್ಲಿ ಹೂತು ಹಾಕಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ. ಫಹಲ್ಗಾಮ್ ನಲ್ಲಿ ಧರ್ಮ ನೋಡಿ ಅಮಾಯಕರನ್ನು ಕೊಂದ್ರು, ನಾವು ಅವರ ಕರ್ಮ ನೋಡಿ ಮಣ್ಣಲ್ಲಿ ಹೂತು ಹಾಕಿದ್ದೇವೆ. ಭಾರತದ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಮೇಲೆ ಕಣ್ಣಿಟ್ರೆ ಮಣ್ಣಲ್ಲಿ ಹೂತು ಹಾಕ್ತೀವಿ , ಆಪರೇಷನ್ ಸಿಂಧೂರ್ ಬರೀ ಹೆಸರಲ್ಲ ಎಂದು ಉಗ್ರರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಮಸ್ಕರಿಸುತ್ತೇನೆ. ಶತ್ರುಗಳನ್ನು ನಾಶಪಡಿಸಿದ ಆ ಶಕ್ತಿಯನ್ನು ಅನುಭವಿಸಲು ನಾನು ಇಲ್ಲಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನಿ ಚೌಕಿಗಳನ್ನು ಮತ್ತು ಬಂಕರ್ಗಳನ್ನು ನೀವು ನಾಶಪಡಿಸಿದ ರೀತಿ, ಶತ್ರುಗಳು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

ಇಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಿಮ್ಮೊಂದಿಗೆ ಇರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ #ಆಪರೇಷನ್ ಸಿಂಧೂರ್ ಸಮಯದಲ್ಲಿ ನೀವೆಲ್ಲರೂ ಈ ಕೆಲಸ ಮಾಡಿದ್ದಕ್ಕಾಗಿ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ. ನಿಮ್ಮ ರಕ್ಷಣಾ ಸಚಿವರಾಗುವ ಮೊದಲು, ನಾನು ಭಾರತೀಯ ನಾಗರಿಕ. ರಕ್ಷಣಾ ಸಚಿವರಾಗುವುದರ ಜೊತೆಗೆ, ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular