HomeBusinessಟರ್ಮ್ ಇನ್ಶುರೆನ್ಸ್ ಮಾಡಿಸೋ ಮುನ್ನ ಈ ತಪ್ಪು ಮಾಡಬೇಡಿ : ವಿಮಾ ಕಂಪನಿಗೆ ಎಕ್ಸ್ಟ್ರಾ ಹಣ...

ಟರ್ಮ್ ಇನ್ಶುರೆನ್ಸ್ ಮಾಡಿಸೋ ಮುನ್ನ ಈ ತಪ್ಪು ಮಾಡಬೇಡಿ : ವಿಮಾ ಕಂಪನಿಗೆ ಎಕ್ಸ್ಟ್ರಾ ಹಣ ಕಟ್ಟಿದ್ರೆ ₹1.44 ಕೋಟಿ ಲಾಸ್

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕುಟುಂಬದ ಆರ್ಥಿಕ ಭದ್ರತೆಗಾಗಿ ಜೀವ ವಿಮೆ (Life Insurance) ಮಾಡಿಸುವುದು ಅತ್ಯಗತ್ಯವಾಗಿದೆ. ಹಿಂದೆಲ್ಲಾ ಜನರು ಕೇವಲ ಹೂಡಿಕೆ ಆಧಾರಿತ ಎಂಡೋಮೆಂಟ್ ಪಾಲಿಸಿಗಳತ್ತ ಮುಖ ಮಾಡುತ್ತಿದ್ದರು. ಆದರೆ ಈಗ, ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಗರಿಷ್ಠ ಮೊತ್ತದ ಆರ್ಥಿಕ ರಕ್ಷಣೆ ನೀಡುವ ಟರ್ಮ್ ಇನ್ಶುರೆನ್ಸ್ (Term Insurance) ಪ್ಲಾನ್‌ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಆದಾಗ್ಯೂ, ಈ ಪಾಲಿಸಿ ತೆಗೆದುಕೊಳ್ಳುವಾಗ ಜನರು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು

ಟರ್ಮ್ ಪ್ಲಾನ್ ಎಂದರೇನು? ಇದನ್ನು ಎಷ್ಟು ವರ್ಷದವರೆಗೆ ತೆಗೆದುಕೊಳ್ಳಬೇಕು? ಎಂಬ ಸಂಪೂರ್ಣ ಹಣಕಾಸು ಲೆಕ್ಕಾಚಾರ ಇಲ್ಲಿದೆ:

ಟರ್ಮ್ ಇನ್ಶುರೆನ್ಸ್ ಎಂದರೇನು?

ಇದು ಅತ್ಯಂತ ಸರಳ ಮತ್ತು ಶುದ್ಧ ಜೀವ ವಿಮಾ ಯೋಜನೆಯಾಗಿದೆ.ಪಾಲಿಸಿದಾರನು ಪಾಲಿಸಿ ಅವಧಿಯಲ್ಲಿ ಅನಿರೀಕ್ಷಿತವಾಗಿ ಮರಣ ಹೊಂದಿದರೆ, ಆತನ ಕುಟುಂಬಕ್ಕೆ (ನಾಮಿನಿಗೆ) ಪೂರ್ಣ ವಿಮಾ ಮೊತ್ತವನ್ನು (ಉದಾಹರಣೆಗೆ 1 ಕೋಟಿ ರೂ.) ಪಾವತಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಗ್ಗದ ಪ್ರೀಮಿಯಂ: ಪಾಲಿಸಿದಾರನು ಪಾಲಿಸಿ ಅವಧಿಯಲ್ಲಿ ಬದುಕುಳಿದಿದ್ದರೆ, ಕೊನೆಯಲ್ಲಿ ಯಾವುದೇ ರಿಟರ್ನ್ಸ್ ಸಿಗುವುದಿಲ್ಲ. ಇದೇ ಕಾರಣಕ್ಕೆ ಇದರ ಪ್ರೀಮಿಯಂ ಇತರೆ ಪಾಲಿಸಿಗಳಿಗಿಂತ ಅತ್ಯಂತ ಅಗ್ಗವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲೇ ಇದನ್ನು ಖರೀದಿಸಿದರೆ ಪ್ರೀಮಿಯಂ ಇನ್ನೂ ಕಮ್ಮಿ ಇರುತ್ತದೆ.

100 ವರ್ಷಗಳವರೆಗೆ ಪಾಲಿಸಿ ಬೇಡ: ತಜ್ಞರ ಎಚ್ಚರಿಕೆ

ಬಹಳಷ್ಟು ಜನರು ಪ್ರೀಮಿಯಂ ಕಡಿಮೆ ಇದೆ ಎಂದು ಭಾವಿಸಿ 75 ಅಥವಾ 100 ವರ್ಷಗಳವರೆಗೆ ಟರ್ಮ್ ಪ್ಲಾನ್ ತೆಗೆದುಕೊಳ್ಳುತ್ತಾರೆ. ಆದರೆ ಇದು ತಪ್ಪು ನಿರ್ಧಾರ ಎನ್ನುತ್ತಾರೆ ತಜ್ಞರು.

ಯಾಕೆ ಅಗತ್ಯವಿಲ್ಲ?: ಸಾಮಾನ್ಯವಾಗಿ 60 ರಿಂದ 65 ವರ್ಷ ತುಂಬುವಷ್ಟರಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಗಿದು ಅವರು ಸ್ವಾವಲಂಬಿಗಳಾಗುತ್ತಾರೆ. ಮನೆ ಸಾಲದಂತಹ ಜವಾಬ್ದಾರಿಗಳೂ ತೀರುತ್ತವೆ. ನಿಮ್ಮ ನಿವೃತ್ತಿಯ ನಂತರ ನಿಮ್ಮ ಆದಾಯವನ್ನು ಯಾರೂ ಅವಲಂಬಿಸದ ಕಾರಣ, 65 ವರ್ಷದ ನಂತರ ಟರ್ಮ್ ಇನ್ಶುರೆನ್ಸ್ ಹೊರೆ ಅನಗತ್ಯ.

65 ವರ್ಷ Vs 75 ವರ್ಷ: ಶಾಕಿಂಗ್ ಲೆಕ್ಕಾಚಾರ ನೋಡಿ

25 ವರ್ಷದ ಯುವಕನೊಬ್ಬ 1 ಕೋಟಿ ರೂಪಾಯಿ ಪಾಲಿಸಿ ತೆಗೆದುಕೊಳ್ಳುವ ಹೂಡಿಕೆಯ ಗಣಿತ ಹೀಗಿದೆ:

65 ವರ್ಷದವರೆಗೆ ಪ್ಲಾನ್ ತಗೊಂಡ್ರೆ: ವಾರ್ಷಿಕ ಪ್ರೀಮಿಯಂ ಕೇವಲ 15,000 ರೂ. (ಒಟ್ಟು 40 ವರ್ಷ ಪಾವತಿ).

75 ವರ್ಷದವರೆಗೆ ಪ್ಲಾನ್ ತಗೊಂಡ್ರೆ: ವಾರ್ಷಿಕ ಪ್ರೀಮಿಯಂ 21,000 ರೂ.ಗೆ ಏರಿಕೆಯಾಗುತ್ತದೆ (ಒಟ್ಟು 50 ವರ್ಷ ಪಾವತಿ). ಹೆಚ್ಚುತ್ತಿರುವ ವಯಸ್ಸಿನ ಆರೋಗ್ಯದ ರಿಸ್ಕ್ ನೋಡಿ ಕಂಪನಿಗಳು ಪ್ರೀಮಿಯಂ ಹೆಚ್ಚಿಸುತ್ತವೆ.

ಲಾಸ್ ಎಷ್ಟು?: 75 ವರ್ಷದವರೆಗೆ ಪಾಲಿಸಿ ಮುಂದುವರಿಸುವುದರಿಂದ, ನೀವು ವಿಮಾ ಕಂಪನಿಗೆ ಒಟ್ಟಾರೆಯಾಗಿ ಬರೋಬ್ಬರಿ 4,50,000 ರೂ. ಹೆಚ್ಚುವರಿ ಪ್ರೀಮಿಯಂ ಪಾವತಿಸಿದಂತಾಗುತ್ತದೆ!

ಅದೇ ಹಣ ಮ್ಯೂಚುವಲ್ ಫಂಡ್‌ನಲ್ಲಿಟ್ಟರೆ 1.44 ಕೋಟಿ ಲಾಭ

ವಿಮಾ ಕಂಪನಿಗೆ ಕೊಡುವ ಈ ಹೆಚ್ಚುವರಿ ಹಣವನ್ನು ಸ್ಮಾರ್ಟ್ ಆಗಿ ಹೂಡಿಕೆ ಮಾಡಿದರೆ ಸಿಗುವ ಲಾಭ ನಿಬ್ಬೆರಗಾಗಿಸುವಂತಿದೆ:

ನೀವು 25ನೇ ವಯಸ್ಸಿನಿಂದ ಇದೇ ಹೆಚ್ಚುವರಿ ಮೊತ್ತವನ್ನು (ವರ್ಷಕ್ಕೆ 6,000 ರೂ.) ಯಾವುದಾದರೂ ಉತ್ತಮ ಮ್ಯೂಚುವಲ್ ಫಂಡ್‌ನಲ್ಲಿ (Mutual Fund) ಹೂಡಿಕೆ ಮಾಡುತ್ತಾ ಬಂದರೆ, 75ನೇ ವಯಸ್ಸಿನ ವೇಳೆಗೆ ಕೇವಲ ಶೇಕಡಾ 12 ರಷ್ಟು ಸಾಧಾರಣ ಲಾಭ ಸಿಕ್ಕರೂ ಸಹ, ಚಕ್ರಬಡ್ಡಿಯ (Compounding) ಶಕ್ತಿಯಿಂದ ನಿಮ್ಮ ಕೈಗೆ ಬರೋಬ್ಬರಿ 1,44,00,000 ರೂ. (ಒಂದು ಕೋಟಿ ನಲವತ್ತನಾಲ್ಕು ಲಕ್ಷಕ್ಕೂ ಅಧಿಕ) ಸಿಗುತ್ತದೆ

ಹೀಗಾಗಿ, ನಿವೃತ್ತಿಯ ನಂತರದ ವಯಸ್ಸಿಗೆ ಟರ್ಮ್ ಇನ್ಶುರೆನ್ಸ್ ಪ್ರೀಮಿಯಂ ಕಟ್ಟುವ ಬದಲು, ಆ ಹಣವನ್ನು ಹೂಡಿಕೆ ಮಾಡುವುದೇ ಜಾಣತನದ ಲಕ್ಷಣ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular