HomeKarnatakaBIG NEWS: ಆದಾಯ ಪಾತಾಳಕ್ಕೆ ಕುಸಿಯುತ್ತಿದೆ: ಬೆಲೆ ಏರಿಕೆ ಗಗನಕ್ಕೇರುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

BIG NEWS: ಆದಾಯ ಪಾತಾಳಕ್ಕೆ ಕುಸಿಯುತ್ತಿದೆ: ಬೆಲೆ ಏರಿಕೆ ಗಗನಕ್ಕೇರುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೋ ದೊಡ್ಡ ಸಾಧನೆ ಮಾಡಿದಂತೆ ಹೇಳಿಕೊಳ್ಳುತ್ತಿದೆ? ಪೆಟ್ರೋಲ್, ದೀಸೆಲ್ ದರ ದಿನದಿಂದ ದಿನಕ್ಕೆ ಏರಿಸುತ್ತಿದ್ದೀರಿ. ಜನರಿಗೆ ಊಟನ ಮಾಡಬೇಡಿ ಅಂತೀರಾ. ಮದುವೆ ಆದರೆ ಚಿನ್ನನೂ ಖರೀದಿಸಬೇಡಿ ಅಂತೀರಾ. ನೀವು ಪೆಟ್ರೋಲ್ ಡೀಸೆಲ್, ಗ್ಯಾಸ್ ದರವನ್ನು ಮಾತ್ರ ಏರಿಸ್ತಾ ಇರಬಹುದು. ಜನರು ಏನೂ ಕ್ಗರೀದಿ ಮಾಡದೇ ಇರಬೇಕು ಎಂದರೆ ಹೇಗೆ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಲ್ಲರೂ ಬಸ್ ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಮೋದಿ ಕರೆ ನೀಡಿದರು ಇಂದು ಯಾರಾದರೂ ನಾಯಕರು ಮೆಟ್ರೋದಲ್ಲಿ ಹೋಗ್ತಿದ್ದಾರಾ? ಅಧಿಕಾರಿಗಳು ಹೋಗುತ್ತಿದ್ದಾರಾ? ಬಿಜೆಪಿ ನಾಯಕರು ಮೆಟ್ರೋದಲ್ಲಿ ಹೋಗುತ್ತಿದೀರಾ? ಸುಮ್ಮನೇ ಒಂದು ದಿನ ಹೋಗಿ ಟೀವಿಗೆ, ಪೇಪರ್ ಗೆ ಪೋಸ್ ಕೊಡಲು ಹೋಗುತ್ತಿದ್ದಾರೆ. ಪ್ರ್ಯಾಕ್ಟಿಕಲ್ ಆಗಿ ಇದನ್ನೆಲ್ಲ ಮಾಡಲು ಸಾಧ್ಯವೇ? ಇಲ್ಲ ಎಂಬುದು ಗೊತ್ತಿದ್ದೂ ಅವರು ಖುಷಿ ಖುಷಿಯಾಗಿ ಜನರಿಗೆ ತೊಂದರೆ ಆಗಲಿ ಎಂದೇ ಇಂತಹ ಕಾರ್ಯಕರಮಗಳನ್ನು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ದಿನದಿಂದ ದಿನಕ್ಕೆ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನತೆ ನಮಗೆ ಸಹಕಾರ ನೀಡಿ ಎಂದು ಕರೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಅದಕ್ಕಾಗಿಯೇ ಜನರು ಬದುಕಲೆಂದೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು. ನಮ್ಮ ಗ್ಯಾರಂಟಿ ಕರ್ನಾಟಕ ಗ್ಯಾರಂಟಿ ಮಾತ್ರವಲ್ಲ ಇಡೀ ದೇಶದಲ್ಲಿ ಮಾದರಿಯಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಕರ್ನಾಟಕದ ಕಾಂಗ್ರ್ಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಇಂದು ಮೆಚ್ಚಿಕೊಂಡಿವೆ ಎಂದರು.

ಬಿಜೆಪಿ ನಾಯಕರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ. ಅವರು ಜನರ ಧರ್ಮ, ಜಾತಿ ಹೀಗೆ ಭಾವನಾತ್ಮಕ ವಿಚಾರಗಳ ಮೇಲೆ ಮಾತನಾಡುತ್ತಾರೆ. ನಾವು ಜನರ ಹೊಟ್ಟೆ ತುಂಬಿದೆಯೇ, ಅವರ ಬದುಕು, ಜೀವನ, ಸಮಸ್ಯೆಗಳ ಬಗ್ಗೆ ಚರ್ಚಿಸಿ ಜನರ ಬದುಕಿನ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular