HomeKarnatakaರಾಮಮಂದಿರ ಲೂಟಿ ಹಿನ್ನೆಲೆ: ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿ ರಕ್ಷಣೆಗೆ ಸಿಸಿಟಿವಿ ಅಳವಡಿಕೆ ಕಡ್ಡಾಯ

ರಾಮಮಂದಿರ ಲೂಟಿ ಹಿನ್ನೆಲೆ: ರಾಜ್ಯದ ಮುಜರಾಯಿ ದೇವಾಲಯಗಳ ಹುಂಡಿ ರಕ್ಷಣೆಗೆ ಸಿಸಿಟಿವಿ ಅಳವಡಿಕೆ ಕಡ್ಡಾಯ

ಬೆಂಗಳೂರು: ರಾಮ ಮಂದಿರ ವಿಚಾರದಲ್ಲಿ ನಡೆದಿರುವ ಅಕ್ರಮ ಭಕ್ತರಿಗೆ ಅಗೌರವ ತಂದಿದೆ. ಜನರು ಭಕ್ತಿಯಿಂದ ದೇಣಿಗೆ ನೀಡಿದ್ದು, ಧರ್ಮದ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ಹೀಗಾಗಿ ನಮ್ಮ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಕಡ್ಡಾಯವಾಗಿ ಹುಂಡಿಯ ಮುಂದೆ ಸಿಸಿಟಿವಿ ಅಳವಡಿಕೆಗೆ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಹುಂಡಿ, ಹಣ ತೆಗೆಯುವ ಹಾಗೂ ಅದನ್ನು ಎಣಿಸುವ ಜಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್ ಪಿ ಕಚೇರಿಗೆ, ಉಪ ಆಯುಕ್ತರ ಕಚೇರಿಗೆ ರವಾನೆಯಾಗುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾಅದ್ಯಂತ ಎಲ್ಲ ಮುಜರಾಯಿ ದೇವಸ್ಥಾನದಲ್ಲಿ ಹುಂಡಿ ಎದುರು ಸಿಸಿಟಿವಿ ಅಳವಡಿಕೆ ಮಹತ್ವದ ತೀರ್ಮಾನ ಆಗಿದೆ. ರಾಮಮಂದಿರ ಹುಂಡಿ ದುರ್ಬಳಕೆ ವಿಚಾರ ಆಗಿದೆ ಹಾಗಾಗಿ ಅದರಲ್ಲಿ ನಮಗೆ ಮಾನಸಿಕವಾಗಿ ಅವಮಾನ ಆಗಿದೆ. ಧರ್ಮದ ಹೆಸರಿನಲ್ಲಿ ಈ ರೀತಿ ತೊಂದರೆ ಆಗಿದೆ. ನಮ್ಮ ದೇವಸ್ಥಾಬಹಳಲ್ಲಿ ಇ ರೀತಿ ಆಗಬಾರದು ಎಂದು ಇಡೀ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನದಲ್ಲಿ ಹುಂಡಿ ಎದುರು ಸಿಸಿಟಿವಿ ಅಳವಡಿಕೆ ಆಗಲಿದೆ ಎಂದರು.

ಸಿಸಿಟಿವಿ ಕಲೆಕ್ಷನ್ ಹಣ ತೆಗೆಯವುದು, ಎಣಿಸುವುದು ಎಸ್ಪಿ, ಡಿಸಿ ಅವರ ಕಚೇರಿಗೆ ನೀಡಲಾಗುತ್ತದೆ‌. ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಇಡಬೇಕು. ಬೀಗ ತೆಗೆಯುವಾಗ ಮುಚ್ಚುವಾಗ ಕ್ಯಾಮರಾ ಆನ್ ಆಗಿರಬೇಕು ಅಂತಾ ಮಾರ್ಗದರ್ಶನ ಕೊಟ್ಟಿದ್ದೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular