HomeInternationalದುಡಿಯಲು ದುಬೈಗೆ ಹೋದ ವ್ಯಕ್ತಿಗೆ ದುಡ್ಡಿನ ರಾಶಿಯೇ ಸಿಕ್ತು: 1 ಮಿಲಿಯನ್ ಡಾಲರ್ ಜಾಕ್ ಪಾಟ್...

ದುಡಿಯಲು ದುಬೈಗೆ ಹೋದ ವ್ಯಕ್ತಿಗೆ ದುಡ್ಡಿನ ರಾಶಿಯೇ ಸಿಕ್ತು: 1 ಮಿಲಿಯನ್ ಡಾಲರ್ ಜಾಕ್ ಪಾಟ್ ಗೆದ್ದ NRI

ಜಿದ್ದಾ: ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದ ಇತ್ತೀಚಿನ ದುಬೈ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಪ್ರಚಾರದ ಡ್ರಾನಲ್ಲಿ 1 ಮಿಲಿಯನ್ ಯುಎಸ್ ಡಾಲರ್‌ ಬಹುಮಾನ ಭಾರತೀಯನ ಪಾಲಾಗಿದೆ.

ಭಾರತೀಯ ವಿಜೇತರ ನಿರಂತರವಾಗಿ ಬೆಳೆಯುತ್ತಿರುವ ಪಟ್ಟಿಗೆ ತೆಲುಗು ಎನ್‌ಆರ್‌ಐ ಸೇರ್ಪಡೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದವರಾದ 45 ವರ್ಷದ ಕರ್ಣಯ್ಯ ಮಂಡೊಲ್ಲ ಅವರು ದುಬೈನಲ್ಲಿ ಸಾಫ್ಟ್‌ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಿಲೇನಿಯಂ ಮಿಲಿಯನೇರ್ ಲಾಟರಿಯಲ್ಲಿ US $ 1 ಮಿಲಿಯನ್ ಗೆದ್ದಿದ್ದಾರೆ. ಅವರು ಅಕ್ಟೋಬರ್ 5 ರಂದು ಆನ್‌ ಲೈನ್‌ ನಲ್ಲಿ ಟಿಕೆಟ್ ಖರೀದಿಸಿದ್ದರು.

ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಉಳಿಸಲಾಗುವುದು ಮತ್ತು ಸ್ವಲ್ಪ ಭಾಗವನ್ನು ಪರೋಪಕಾರಿ ಚಟುವಟಿಕೆಗಳಿಗೆ ಖರ್ಚು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

1999 ರಿಂದ ಮಿಲೇನಿಯಮ್ ಮಿಲಿಯನೇರ್ ಪ್ರಚಾರದಲ್ಲಿ US$1 ಮಿಲಿಯನ್ ಗಳಿಸಿದ 217 ನೇ ಭಾರತೀಯ ಪ್ರಜೆ ಕರ್ಣಯ್ಯ ಅವರಾಗಿದ್ದಾರೆ. ಭಾರತೀಯ ಪ್ರಜೆಗಳು ಟಿಕೆಟ್‌ ಗಳ ದೊಡ್ಡ ಖರೀದಿದಾರರಾಗಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular