HomeEntertainmentBIG NEWS: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಯುವತಿ ಮೇಲೆ ಹಲ್ಲೆ ಆರೋಪ

BIG NEWS: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಯುವತಿ ಮೇಲೆ ಹಲ್ಲೆ ಆರೋಪ

ಬೆಂಗಳೂರು: ಖ್ಯಾತ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಮಾಧುರಿ ಎಂಬ ಯುವತಿ ತನ್ನ ಸಹೋದರಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಟಿ ಲಕ್ಷ್ಮೀ ಸಿದ್ದಯ್ಯ ಅವರ ಐ20 ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಈ ವೇಳೆ ನಟಿ ಲಕ್ಷ್ಮೀ ಹಾಗೂ ಯುವತಿ ಮಾಧುರಿ ಇಬ್ಬರ ನಡುವೆ ರಸ್ತೆಯಲ್ಲಿ ಜಗಳವಾಗಿ ಗಲಾಟೆ ನಡೆದಿದೆ. ಕೋಪದ ಬರದಲ್ಲಿ ನಟಿ ಲಕ್ಷ್ಮೀ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಮಾಧುರಿ ಸಹೋದರಿ ಐಶ್ವರ್ಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಲಾಟೆ ತೀವ್ರವಾಗುತ್ತಿದ್ದಂತೆ ಮಾಧುರಿ ಸಹೋದರಿ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವೇಳೆ ಮೊಬೈಲ್ ಕಸಿದು ಲಕ್ಷ್ಮೀ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ದೂರು ನೀಡಲು ಹೋದರು ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಪದೇ ಪದೇ ಠಾಣೆಗೆ ಹೋಗಿ ಕೇಳಿದ್ದಕ್ಕೆ ಈಗ ದೂರು ದಾಖಲಿಸಿಕೊಂಡಿದ್ದಾರೆ ಮಾಧುರಿ ತಾಯಿ ಆರೋಪಿಸಿದ್ದಾರೆ. ಲಕ್ಷ್ಮೀ ಸಿದ್ದಯ್ಯ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular