HomeLive Newsರಾಜ್ಯಾದ್ಯಂತ ‘ಗ್ಯಾಸ್ ಸಿಲಿಂಡರ್’ ಸಿಗದೇ ಜನರ ಪರದಾಟ ; ವಿಧಾನಸೌಧದಲ್ಲಿ 'IPL' ಟಿಕೆಟ್‌ಗಾಗಿ ಶಾಸಕರ ಪಿಎಗಳ...

ರಾಜ್ಯಾದ್ಯಂತ ‘ಗ್ಯಾಸ್ ಸಿಲಿಂಡರ್’ ಸಿಗದೇ ಜನರ ಪರದಾಟ ; ವಿಧಾನಸೌಧದಲ್ಲಿ ‘IPL’ ಟಿಕೆಟ್‌ಗಾಗಿ ಶಾಸಕರ ಪಿಎಗಳ ಕ್ಯೂ !

ಬೆಂಗಳೂರು : ರಾಜ್ಯಾದ್ಯಂತ ಗೃಹಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ವಿಧಾನಸೌಧದಲ್ಲಿ ಜನಪ್ರತಿನಿಧಿಗಳ ಆಪ್ತ ಸಹಾಯಕರು ನಾಳೆಯ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯದ ಟಿಕೆಟ್‌ಗಾಗಿ ಮುಗಿಬಿದ್ದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ಶಾಸಕರಿಗೆ ತಲಾ 3 ಉಚಿತ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದ್ದು, ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಚೇರಿ ಈಗ ಟಿಕೆಟ್ ಕೌಂಟರ್ ಆಗಿ ಬದಲಾದಂತಿದೆ.

ಹೌದು.  ರಾಜ್ಯದಲ್ಲಿ ಒಂದೆಡೆ ಸಾಮಾನ್ಯ ಜನರು ಗ್ಯಾಸ್ ಸಿಲಿಂಡರ್ ಸಿಗದೆ ಏಜೆನ್ಸಿಗಳ ಮುಂದೆ ಸಾಲು ನಿಂತಿದ್ದರೆ, ಮತ್ತೊಂದೆಡೆ ವಿಧಾನಸೌಧದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಶಾಸಕರ ಆಪ್ತ ಸಹಾಯಕರು (PA) ಕ್ಯೂ ನಿಂತಿರುವ ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿದೆ.

ಆಟೋ ಚಾಲಕರು ಮತ್ತು ಗೃಹಿಣಿಯರು ಗೃಹಬಳಕೆಯ ಹಾಗೂ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಕಂಗಾಲಾಗಿದ್ದಾರೆ. ಆದರೆ, ಜನಪ್ರತಿನಿಧಿಗಳ ಸಹಾಯಕರು ಐಪಿಎಲ್ ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯುವಲ್ಲಿ ಬ್ಯುಸಿಯಾಗಿದ್ದಾರೆ.: ನಾಳೆ (ಏಪ್ರಿಲ್ 5) ನಡೆಯಲಿರುವ ಆರ್‌ಸಿಬಿ (RCB) ಮತ್ತು ಚೆನ್ನೈ (CSK) ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ವಿಧಾನಸೌಧದ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಕೊಠಡಿಯಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. “ಜನ ಸಾಮಾನ್ಯರಿಗೆ ಜೀವನ ನಡೆಸುವ ಚಿಂತೆ, ಶಾಸಕರಿಗೆ ಐಪಿಎಲ್ ಎಂಜಾಯ್ ಮಾಡುವ ಆಸೆ! ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಿಲಿಂಡರ್ ಬುಕ್ ಮಾಡಿದರೂ ಸಕಾಲಕ್ಕೆ ಸಿಗದೆ ಜನರು ಪರದಾಡುತ್ತಿದ್ದಾರೆ. ಆದರೆ ವಿಧಾನಸೌಧದಲ್ಲಿ ಮಾತ್ರ ಐಪಿಎಲ್ ಟಿಕೆಟ್ ಹಂಚಿಕೆ ಜೋರಾಗಿ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಸಕರಿಗೆ ಕೋಟಾ: ಪ್ರತಿ ಶಾಸಕರಿಗೆ ತಲಾ 3 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಲಾಗುತ್ತಿದೆ ಎನ್ನಲಾಗಿದ್ದು, ಇದನ್ನು ಪಡೆಯಲು ಪಿಎಗಳು ಮುಗಿಬಿದ್ದಿದ್ದಾರೆ.

ಸಾರ್ವಜನಿಕರ ಆಕ್ರೋಶ: ಜನರು ತಮ್ಮ ಮೂಲಭೂತ ಅವಶ್ಯಕತೆಗಳಿಗಾಗಿ ಬೀದಿಯಲ್ಲಿ ನಿಂತಿದ್ದರೆ, ಶಾಸಕರು ಮತ್ತು ಅವರ ಬೆಂಬಲಿಗರು ಮೋಜು-ಮಸ್ತಿಗೆ ಆದ್ಯತೆ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸಿಲಿಂಡರ್ ಬುಕ್ ಮಾಡಿದರೂ ಸಕಾಲಕ್ಕೆ ವಿತರಣೆಯಾಗುತ್ತಿಲ್ಲ. ಇದರಿಂದ ಹೋಟೆಲ್ ಉದ್ಯಮ ಹಾಗೂ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular