HomeLatest Newsತೆಲಂಗಾಣ ಸ್ಥಳೀಯ ಚುನಾವಣೆ ಫಲಿತಾಂಶ: 1522 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪ್ರಚಂಡ ಮುನ್ನಡೆ; ಬಿಆರ್‌ಎಸ್, ಬಿಜೆಪಿ ಸುಸ್ತು

ತೆಲಂಗಾಣ ಸ್ಥಳೀಯ ಚುನಾವಣೆ ಫಲಿತಾಂಶ: 1522 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪ್ರಚಂಡ ಮುನ್ನಡೆ; ಬಿಆರ್‌ಎಸ್, ಬಿಜೆಪಿ ಸುಸ್ತು

ಇದೇ ತಿಂಗಳ 11ರಂದು ತೆಲಂಗಾಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು, ಇಂದು ( ಫೆಬ್ರವರಿ 23 ) ಅವುಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಪ್ರಚಂಡ ಮುನ್ನಡೆಯನ್ನು ಸಾಧಿಸಿದೆ.

ಒಟ್ಟು 7 ಕಾರ್ಪೋರೇಷನ್‌ಗಳ 414 ವಾರ್ಡ್ ಹಾಗೂ 116 ಪುರಸಭೆಗಳ 2581 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಇಂದು ಸಂಜೆ 7 ಗಂಟೆ ಸಮಯಕ್ಕೆ ಕಾಂಗ್ರೆಸ್ 2581 ಪುರಸಭೆ ವಾರ್ಡ್‌ಗಳ ಪೈಕಿ 1346 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದು, 414 ಮಹಾನಗರ ಪಾಲಿಕೆ ವಾರ್ಡ್‌ಗಳ ಪೈಕಿ 176 ವಾರ್ಡ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಂಪೂರ್ಣ ಫಲಿತಾಂಶ ಇನ್ನೂ ಬಹಿರಂಗವಾಗಬೇಕಿದ್ದು, ಸಂಜೆ 7 ಗಂಟೆವರೆಗಿನ ಫಲಿತಾಂಶದ ವಿವರ ಈ ಕೆಳಕಂಡಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

7 ಮಹಾನಗರ ಪಾಲಿಕೆಯ 414 ವಾರ್ಡ್‌ಗಳ ಫಲಿತಾಂಶ ( ಮುನ್ನಡೆ )

ಕಾಂಗ್ರೆಸ್ – 176

ಬಿಆರ್‌ಎಸ್‌ – 53

ಬಿಜೆಪಿ – 73

ಇತರೆ- 76

( ಇಲ್ಲಿಯವರೆಗೆ 374 ವಾರ್ಡ್‌ಗಳ ಅಂಕಿಅಂಶ ಮಾತ್ರ ಘೋಷಣೆಯಾಗಿದೆ )

116 ಪುರಸಭೆಗಳ ಒಟ್ಟು 2581 ವಾರ್ಡ್‌ಗಳ ಫಲಿತಾಂಶ ( ಮುನ್ನಡೆ )

ಕಾಂಗ್ರೆಸ್ – 1346

ಬಿಆರ್‌ಎಸ್‌ – 723

ಬಿಜೆಪಿ – 241

ಇತರೆ- 252

ಈ ಮೂಲಕ ಮಹಾನಗರ ಪಾಲಿಕೆ ಹಾಗೂ ಪುರಸಭೆ ಎರಡೂ ಸೇರಿದಂತೆ ಒಟ್ಟು 1522 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಸಂಜೆ 7 ಗಂಟೆ ಸಮಯಕ್ಕೆ ಮುನ್ನಡೆ ಸಾಧಿಸಿ ಬಿಆರ್‌ಎಸ್ ಹಾಗೂ ಬಿಜೆಪಿಯಿಂದ ಭಾರೀ ಅಂತರ ಕಾಯ್ದುಕೊಂಡು ಅಬ್ಬರಿಸಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular