HomeKarnatakaಬಿ.ಕೆ.ಹರಿಪ್ರಸಾದ್ ಒಂದು ದಿನ ಬಿಟ್ಟು ಪದಗ್ರಹಣ ಸಮಾರಂಭ ಮಾಡಿಕೊಂಡಿದ್ದರೆ ಭೂಮಿ ಬಾಯಿ ಬಿಡುತ್ತಿತ್ತೇ? ನೀಟ್ ಪರೀಕ್ಷೆ...

ಬಿ.ಕೆ.ಹರಿಪ್ರಸಾದ್ ಒಂದು ದಿನ ಬಿಟ್ಟು ಪದಗ್ರಹಣ ಸಮಾರಂಭ ಮಾಡಿಕೊಂಡಿದ್ದರೆ ಭೂಮಿ ಬಾಯಿ ಬಿಡುತ್ತಿತ್ತೇ? ನೀಟ್ ಪರೀಕ್ಷೆ ದಿನ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವ ಅಗತ್ಯವಿತ್ತೇ? ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ

ಬೆಂಗಳೂರು: ನೀಟ್ ಪರೀಕ್ಷೆ ದಿನವೇ ಕೆಪಿಸಿಸಿಯ ನೂತನ ಅಧ್ಯಕ್ಷ ವಿಧಾನ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​​ ಪದಗ್ರಹಣ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿ.ಕೆ ಹರಿಪ್ರಸಾದ್ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಿಂದಾಗಿ ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ನೀಟ್​​ ಪರೀಕ್ಷೆಯ ದಿನವೇ ಈ ಕಾರ್ಯಕ್ರಮ ನಡೆದಿರುವುದು ಸರಿಯಲ್ಲ. ಕಾಂಗ್ರೆಸ್ ಕಾರ್ಯಕ್ರಮದಿಂದ ನೀಟ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಹಲವರಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ತಡವಾಗಿದೆ ಎಂದು ಎಂದು ಬಿಜೆಪಿ ದೂರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀಟ್​​ ಪರೀಕ್ಷೆಯ ದಿನವೇ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿಸೂರ್ಯ ಕಿಡಿ ಕಾರಿದ್ದು, ಹರಿಪ್ರಸಾದ್ ನಿನ್ನೆ ಬದಲು ಇಂದು ಕಾರ್ಯಕ್ರಮ ಮಾಡಬಹುದಿತ್ತು. ಒಂದು ದಿನ ತಡವಾಗಿ ಪದಗ್ರಹಣ ಮಾಡಿ ಸಮಾರಂಭ ಮಾಡಿದ್ದರೆ ಭೂಮಿ ಬಾಯಿ ಬಿಡುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ.

ನೀಟ್ ಪರೀಕ್ಷೆ ಇದೆ ಎಂದು ಗೊತ್ತಿದ್ದೂ ಕೂಡ ಕಾಂಗ್ರೆಸ್ ನಾಯಕರು ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕ್ರಮದಿಂದಾಗಿ ಟ್ರಾಫಿಕ್ ಜಾಅಮ್ ಉಂಟಾಗಿದೆ. ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರದಾಡಿದ್ದಾರೆ. ತಡವಾಗಿ ಬಂದಿದ್ದಕ್ಕೆ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೇ ವಾಪಸ್ ಹೋಗಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಮಕ್ಕಳ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ಮಕ್ಕಳಿಗೂ ಸಮಸ್ಯೆಯಾಗುತ್ತಿರಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ದೊಡ್ಡದಾಗಿ ಭಾಷಣ ಬಿಗಿಯುತ್ತಾರೆ. ನಾವು ಮಕ್ಕಳ ಪರವಾಗಿ ಇದ್ದೇವೆ ಎಂದು ಡ್ರಾಮಾ ಮಾಡುತ್ತಾರೆ. ಈಗಲಾದರೂ ಸಿಎಂ ಇಂತಹ ಕಾರ್ಯಕ್ರಮ ಬಗ್ಗೆ ಗಮನ ಹರಿಸಲಿ. ಪರೀಕ್ಷೆಗಳು ಇದ್ದಾಗ ಜನರಿಗೆ ಸಮಸ್ಯೆ ಆಗದಂತೆ ನಿಯಮ ತರಬೇಕು. ಇಂತಹ ಸಂದರ್ಭಗಳಲ್ಲಿ ಈ ರೀತಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದು. ವಿಐಪಿ ಸಂಸ್ಕೃತಿಯಿಂದ ಟ್ರಾಫಿಕ್ ಸಮಸ್ಯೆ ನಿಯಮ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.‌

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular