HomeJobsಮುಂದುವರಿದ ಉದ್ಯೋಗ ಕಡಿತ: 2026ರಲ್ಲಿ ಯಾವ ಯಾವ ಕಂಪನಿಗಳು?

ಮುಂದುವರಿದ ಉದ್ಯೋಗ ಕಡಿತ: 2026ರಲ್ಲಿ ಯಾವ ಯಾವ ಕಂಪನಿಗಳು?

2026ನೇ ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತದೊಂದಿಗೆ ಆರಂಭವಾಗಿದೆ. ಜನವರಿಯಲ್ಲಿಯೇ ಹೊಸ ಸುತ್ತಿನ ಉದ್ಯೋಗ ಕಡಿತ ಮತ್ತು ವಜಾ ಪ್ರಕ್ರಿಯೆ ಸುದ್ದಿಯಾಗುತ್ತಿದೆ. ಜನವರಿ ಮೊದಲ ವಾರದಲ್ಲೇ ಘೋಷಣೆ ಮಾಡಿದಂತೆ ಅಮೆಜಾನ್  ಮತ್ತು ಮೆಟಾ ಕಂಪನಿಗಳು ಉದ್ಯೋಗ ಕಡಿತವನ್ನು ಪ್ರಾರಂಭಿಸಿವೆ.

ಕೃತಕ ಬುದ್ಧಿಮತ್ತೆ (ಎಐ) ಮೇಲಿನ ಅತಿಯಾದ ಬಂಡಾವಳ ಹೂಡಿಕೆ ಈ ವರ್ಷ ಇನ್ನಷ್ಟು ಹೆಚ್ಚಾಗಲಿದ್ದು, ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಭಾರೀ ಸಂಖ್ಯೆಯ ಉದ್ಯೋಗ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಹೊಸ ನೇಮಕಾತಿಗಾಗಿ ಕಾಯುವ ಬದಲು ಕೆಲಸ ಉಳಿಸಿಕೊಳ್ಳುವ, ಉದ್ಯೋಗ ಮಾರುಕಟ್ಟೆಯ ಹೊಸ ನೀತಿಗೆ ಅನುಗುಣವಾಗಿ ವಜಾ ಭೀತಿಯಿಂದ ಪಾರಾದರೆ ಸಾಕು ಎಂದು ಉದ್ಯೋಗಿಗಳು ಚಿಂತಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೊಡ್ಡ ಕಾರ್ಪೊರೇಟ್‌ ಕಂಪನಿಗಳು ಮಾತ್ರವಲ್ಲ, ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸಹ ವೆಚ್ಚವನ್ನು ಉಳಿಸಲು ಮತ್ತು ಮಾನವ ಅವಲಂಬನೆಯನ್ನು ಕಡಿಮೆ ಮಾಡಲು ಬಯಸಿವೆ. ಇದಕ್ಕಾಗಿ ಚಿಕ್ಕ ಚಿಕ್ಕ ತಂಡಗಳನ್ನು ಉಳಿಸಿಕೊಳ್ಳುವ ತಂತ್ರವನ್ನು ರೂಪಿಸಿದ್ದು, ಉದ್ಯೋಗ ಕಡಿತವಾಗುತ್ತಿದೆ.

ಸಾಫ್ಟ್‌ವೇರ್ ಕೋಡ್ ಬರೆಯಲು ಹಾಗೂ ದಿನನಿತ್ಯದ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಜನರನ್ನು ನೇಮಕ ಮಾಡಿಕೊಂಡು ಅವರಿಗೆ ಕೊಡುವ ವೇತನವನ್ನು ಎಐಗಳ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಆದ್ದರಿಂದ ನೇಮಾಕಾತಿ ಪ್ರಕ್ರಿಯೆಗಿಂತ ಉದ್ಯೋಗ ಕಡಿತವೇ ಹೆಚ್ಚು ಸುದ್ದಿಯಾಗುತ್ತಿದೆ.

ವರದಿ ಹೇಳುವುದೇನು?: Layoffs.fyi ವರದಿಯ ಪ್ರಕಾರ 2025ರಲ್ಲಿ ಒಟ್ಟು 269 ತಂತ್ರಜ್ಞಾನ ಕಂಪನಿಗಳಿಂದ 1,23,941 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇದು 2024ರಲ್ಲಿ 549 ಕಂಪನಿಗಳಿಂದ ನಡೆದ 1,50,000 ಒಟ್ಟು ಉದ್ಯೋಗ ಕಡಿತಕ್ಕಿಂತ ಕಡಿಮೆಯಾಗಿದೆ.

ಆದರೆ ಕಳೆದ ವರ್ಷ ಪರಿಸ್ಥಿತಿ ಭಿನ್ನವಾಗಿತ್ತು ಈ ಉದ್ಯೋಗ ಕಡಿತದಲ್ಲಿ AI ಪಾತ್ರವು ಹೆಚ್ಚು ಸ್ಪಷ್ಟವಾಗಿತ್ತು. ಚಾಲೆಂಜರ್, ಗ್ರೇ ಮತ್ತು ಕ್ರಿಸ್ಮಸ್ ವರದಿ ಪ್ರಕಾರ 2025ರಲ್ಲಿ ಅಮೆರಿಕಾದಲ್ಲಿ ನಡೆದ ಕನಿಷ್ಠ 55,000 ಜನರ ಉದ್ಯೋಗ ವಜಾಕ್ಕೆ ಎಐ ಮುಖ್ಯ ಕಾರಣವಾಗಿತ್ತು.

ಈಗ ಜಾಗತಿಕವಾಗಿ ಶೇಕಡಾ 15ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪಿಂಟ್ರೆಸ್ಟ್ ಹೇಳಿದೆ. ನಾವು ನಮ್ಮ ಎಐ-ಫಾರ್ವರ್ಡ್ ಕಾರ್ಯತಂತ್ರವನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಾಂಸ್ಥಿಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಎಐ ಪರಿಣತರನ್ನು ನೇಮಿಸಿಕೊಳ್ಳುವುದು ಸೇರಿದೆ ಎಂದು ವಕ್ತಾರರು ಹೇಳಿದ್ದಾರೆ.

ಎಐ ಪರಿಣಿತರ ಕೆಲಸಕ್ಕೆ ಪ್ರತ್ಯೇಕ ಪ್ಯಾಕೇಜ್ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ. ಭವಿಷ್ಯಕ್ಕಾಗಿ ಅಗತ್ಯವಿರುವ ಕೌಶಲ್ಯಗಳನ್ನು ನಿರ್ಣಯಿಸುವಲ್ಲಿ ಶಿಸ್ತುಬದ್ಧ ಹುದ್ದೆಗಳನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಕೆಲವು ಹೊಸ ನೇಮಕಾತಿಗಳು ನಡೆಯಲಿವೆ.

ಟಿಸಿಎಸ್ ಈಗಾಗಲೇ ಮಾರ್ಚ್ ಬಳಿಕ ಶೇ 2ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಜುಲೈ 2025ರಲ್ಲಿ ಸುಮಾರು 12,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು ಘೋಷಿಸಿತ್ತು. ಈ ಕ್ರಮವು ಈಗ ಜಾರಿಗೆ ಬರಲಿದ್ದು, ಮಧ್ಯಮ ಮತ್ತು ಹಿರಿಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

2025ರ ವಿಶ್ವ ಆರ್ಥಿಕ ವೇದಿಕೆ ಸಮೀಕ್ಷೆಯ ಪ್ರಕಾರ ಎಐ ಕಾರಣಕ್ಕೆ ಮುಂದಿನ 5 ವರ್ಷಗಳಲ್ಲಿ ವಿಶ್ವದಾದ್ಯಂತ ಶೇ 41ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸಲಿವೆ. 2026ರಲ್ಲಿ ಇಲ್ಲಿಯವರೆಗೆ ಉದ್ಯೋಗ ಕಡಿತವನ್ನು ಘೋಷಿಸಿರುವ ಟೆಕ್ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್ ಮೊದಲ ಸ್ಥಾನದಲ್ಲಿದೆ.  ಅಮೆಜಾನ್ ಒಟ್ಟು 30,000 ಉದ್ಯೋಗ ಕಡಿತದ ಗುರಿಯನ್ನು ಹೊಂದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular