HomeEntertainment'ಮೈ ಹಿರೋ' ಚಿತ್ರದ ಟೀಸರ್ ರಿಲೀಸ್

‘ಮೈ ಹಿರೋ’ ಚಿತ್ರದ ಟೀಸರ್ ರಿಲೀಸ್

ಅವಿನಾಶ್ ವಿಜಯ್ ಕುಮಾರ್ ಕಥೆ ಬರೆದು ನಿರ್ದೇಶಿಸಿರುವ ‘ಮೈ ಹೀರೋ’ ಚಿತ್ರ ಟೀಸರನ್ನು ಎವಿ ಫಿಲಂ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನೋಡುಗರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಕಂಡಿದೆ.

ಎವಿ ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ದೇಶಕ ಅವಿನಾಶ್‌ ವಿಜಯ್‌ ಕುಮಾರ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಹಾಲಿವುಡ್‌ ನ ಜಿಲಾಲಿ ರೆಜ್‌ ಕಲ್ಲಾಹ್‌ ಸೇರಿದಂತೆ ವೇದಿಕ್‌ ಕೌಶಿಕ್‌, ಅಂಕಿತಾ ಅಮರ್, ನಿರಂಜನ್ ದೇಶಪಾಂಡೆ, ತನುಜಾ ಕೃಷ್ಣಪ್ಪ, ಕ್ಷಿತಿಜ್ ಪವಾರ್, ಪ್ರಕಾಶ್ ಬೆಳವಾಡಿ, ದತ್ತಾತ್ರೇಯ, ಮಾಸ್ಟರ್ ವೇದಿಕುಶಲ್ ಬಣ್ಣ ಹಚ್ಚಿದ್ದಾರೆ. ಜೆಮ್‌ ಶಿವು ಅವರ ಸಂಭಾಷಣೆ, ಕುಮಾರ ಗೌಡ ಛಾಯಾಗ್ರಹಣ ಹಾಗೂ ಮುತ್ತುರಾಜ್ ಟಿ  ಸಂಕಲನವಿದ್ದು, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular