HomeCrimeಅಕ್ರಮ ಸಂಬಂಧ ಶಂಕೆ..… ಪತ್ನಿಯ ಈ ಭಾಗವನ್ನೇ ಕತ್ತರಿಸಿದ ಪತಿ

ಅಕ್ರಮ ಸಂಬಂಧ ಶಂಕೆ..… ಪತ್ನಿಯ ಈ ಭಾಗವನ್ನೇ ಕತ್ತರಿಸಿದ ಪತಿ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಪತಿಯೊಬ್ಬ ತನ್ನ ಪತ್ನಿ ಕತ್ತು ಕತ್ತರಿಸಿ ಹತ್ಯೆಗೈದಿದ್ದಾನೆ. ಪತ್ನಿ ಹತ್ಯೆ ಮಾಡಿದ ವ್ಯಕ್ತಿ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಪತ್ನಿ ಶೀಲ ಶಂಕಿಸಿ ಪತಿ ಈ ಕೊಲೆ ಮಾಡಿದ್ದಾನೆ. ಆರೋಪಿ ರಮೇಶ್‌, ಸುರೇಶಿಯ ಪೇಟೆಯ 56 ನೇ ವಾರ್ಡ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪತ್ನಿ ಏಕ್ತಾ ತಾಯಿ ಮನೆ ಕೂಡ ಇದೇ ಪ್ರದೇಶದಲ್ಲಿದೆ. ರಮೇಶ್‌ ಪ್ರಕಾರ, ಆತ ಕೆಲಸಕ್ಕೆ ಹೋದಾಗ ಆತನ ಪತ್ನಿ ಅನೇಕ ಪುರುಷರನ್ನು ಭೇಟಿಯಾಗ್ತಿದ್ದಳಂತೆ. ಆಕೆಗೆ ಅಕ್ರಮ ಸಂಬಂಧವಿದೆ ಎಂದು ರಮೇಶ್‌ ಆರೋಪ ಮಾಡಿದ್ದಾನೆ.

ಈ ಬಗ್ಗೆ ಆಕೆಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಆಕೆ ಮಾತು ಕೇಳಿರಲಿಲ್ಲ. ನಿನ್ನೆ ಕೋಪಗೊಂಡ ರಮೇಶ್‌, ಮನೆ ಹೊರಗೆ ಮಲಗಿದ್ದ ಪತ್ನಿಯ ಕತ್ತು ಕತ್ತರಿಸಿದ್ದಾನೆ. ಏಕ್ತಾ ತಂದೆ, ರಮೇಶ್‌ ವಿರುದ್ಧ ದೂರು ನೀಡಿದ್ದು, ಪೊಲೀಸರು ರಮೇಶ್‌ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular