HomeKarnatakaಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ; ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ವಸತಿ ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗಣಿತ ಉಪನ್ಯಾಸಕರ 1 ಹುದ್ದೆ, ವಿದ್ಯಾರ್ಹತೆ-ಎಂ.ಎಸ್ಸಿ(ಗಣಿತ), ಗಣಕ ವಿಜ್ಞಾನ ಉಪನ್ಯಾಸಕರ 1 ಹುದ್ದೆ, ವಿದ್ಯಾರ್ಹತೆ-ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಸಿ.ಎ, ಬಿ.ಇ, ಕನ್ನಡ ಭಾಷಾ ಶಿಕ್ಷಕರ 12 ಹುದ್ದೆ, ಆಂಗ್ಲ ಭಾಷಾ ಶಿಕ್ಷಕರ 6 ಹುದ್ದೆ, ಹಿಂದಿ ಭಾಷಾ ಶಿಕ್ಷಕರ 4 ಹುದ್ದೆ, ಗಣಿತ ಶಿಕ್ಷಕರ 3 ಹುದ್ದೆ, ವಿಜ್ಞಾನ ಶಿಕ್ಷಕರ 6 ಹುದ್ದೆ, ಸಮಾಜ ವಿಜ್ಞಾನ ಶಿಕ್ಷಕರ 4 ಹುದ್ದೆಗಳಿವೆ. ಇವರ ವಿದ್ಯಾರ್ಹತೆ-ಪದವಿ ಮತ್ತು ಬಿ.ಇಡಿ(ಟಿ.ಇ.ಟಿ ಉತ್ತೀರ್ಣರಾದವರಿಗೆ ಮೊದಲ ಆದ್ಯತೆ), ಗಣಕ ವಿಜ್ಞಾನ ಶಿಕ್ಷಕರ 6 ಹುದ್ದೆ, ವಿದ್ಯಾರ್ಹತೆ-ಪದವಿ ಬಿಎಸ್ಸಿ, ಬಿಸಿಎ, ಬಿ.ಇ(ಸಿ.ಎಸ್,ಐ.ಎಸ್), ದೈಹಿಕ ಶಿಕ್ಷಣ ಶಿಕ್ಷಕರ 4 ಹುದ್ದೆ, ವಿದ್ಯಾರ್ಹತೆ-ಪದವಿ ಮತ್ತು ಬಿ.ಪಿ.ಇಡಿ ಯನ್ನು ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಅಗತ್ಯ ದಾಖಲೆಗಳ ದೃಢೀಕರಿಸಿದ ಪ್ರತಿಗಳನ್ನು ಜೂನ್ 4 ರೊಳಗಾಗಿ ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular