HomeKarnatakaBIG NEWS: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ: ಆರೋಪಿ ಶಿಕ್ಷಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು

BIG NEWS: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ: ಆರೋಪಿ ಶಿಕ್ಷಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು

ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡುರುವ ಘಟನೆ ರಾಯಚೂರು ಹೊರವಲಯದಲ್ಲಿ ನಡೆದಿದೆ.

ರಾಯಚೂರು ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯ ಸಹ ಶಿಕ್ಷಕ ಮೊಹಬೂಬ್ ಅಲಿ ಎಂಬಾತ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಶ್ಲೀಲ ಮೆಸೇಜ್ ಕಳುಹಿಸಿ, ಮಂಚಕ್ಕೆ ಕರೆದಿದ್ದ. ಶಿಕ್ಷಕನ ಕಿರುಕುಳದ ಬಗ್ಗೆ ಶಿಕ್ಷಕಿ ಮನೆಯಲ್ಲಿ ತಿಳಿಸಿದ್ದರು.

ವಿಷಯ ಗೊತ್ತಾಗುತ್ತಿದ್ದಂತೆ ಶಿಕ್ಷಕಿ ಕುಟುಂಬದವರು ಹಾಗೂ ಸಂಬಂಧಿಕರು ಶಾಲೆ ಬಳಿ ಆಗಮಿಸಿ ಶಿಕ್ಷಕ ಮೆಹಬೂಬ ಅಲಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬುದ್ದಿ ಕಲಿಸಿದ್ದಾರೆ. ಮಾಡಿದ ತಪ್ಪಿಗೆ ಆರೋಪಿ ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಅಲ್ಲದೇ ತಪ್ಪೊಪ್ಪಿಗೆ ಪತ್ರ ಬರೆದು ಎಲ್ಲರ ಬಳಿ ಕ್ಷಮೆ ಕೋರಿದ್ದಾನೆ. ಸದ್ಯ ಶಿಕ್ಷಕ ತಪ್ಪೊಪ್ಪಿಗೆ ಪತ್ರ ಬರೆದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದರಿಂದ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular