HomeHealthಆರೋಗ್ಯಕ್ಕೆ ಉತ್ತಮ ಸೇಬುಹಣ್ಣಿನ ಹೂವಿನಿಂದ ತಯಾರಿಸಿದ ಚಹಾ

ಆರೋಗ್ಯಕ್ಕೆ ಉತ್ತಮ ಸೇಬುಹಣ್ಣಿನ ಹೂವಿನಿಂದ ತಯಾರಿಸಿದ ಚಹಾ

ಸೇಬು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಪ್ರತಿದಿನ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುತ್ತಾರೆ. ಅದೇ ರೀತಿ ಸೇಬಿನ ಹೂವಿನ ಚಹಾ ಕೂಡ ಆರೋಗ್ಯಕ್ಕೆ ತುಂಬಾ ಸಹಕಾರಿ. ಹಾಗಾದ್ರೆ ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

2 ಕಪ್ ನೀರಿಗೆ 1 ಚಮಚ ಸೇಬು ಹೂ ಚಹಾ ಎಲೆಗಳನ್ನು ಸೇರಿಸಿ 5 ನಿಮಿಷ ಕುದಿಸಿ, ಬಳಿಕ ಅದಕ್ಕೆ ಶುಂಠಿ, ದಾಲ್ಚಿನ್ನಿ ಸೇರಿಸಿ ಮತ್ತೆ 5 ನಿಮಿಷ ಕುದಿಸಿ. ಬಳಿಕ ಸೋಸಿ. ತಣ್ಣಗಾದ ಮೇಲೆ ಸೇವಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಸೇವಿಸಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಧುಮೇಹಿಗಳು ಇದನ್ನು ಸೇವಿಸಬಹುದು. ಸೇಬು ಹೂವಿನ ಚಹಾದಲ್ಲಿ ಮೆಗ್ನೀಶಿಯಮ್, ವಿಟಮಿನ್ ಸಿ ಮತ್ತು ಸೋಡಿಯಂ ಇದೆ. ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ಇದು ಬ್ಯಾಕ್ಟೀರಿಯಾ, ವೈರಸ್ ವಿರುದ್ಧ ಹೋರಾಡುತ್ತದೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular