HomeIndiaBREAKING: ಟಿಡಿಪಿ ಹಾಗೂ ವೈಎಸ್ ಆರ್ ಸಿಪಿ ಕಾರ್ಯಕರ್ತ್ಯರ ನಡುವೆ ಸಂಘರ್ಷ: YSRCP...

BREAKING: ಟಿಡಿಪಿ ಹಾಗೂ ವೈಎಸ್ ಆರ್ ಸಿಪಿ ಕಾರ್ಯಕರ್ತ್ಯರ ನಡುವೆ ಸಂಘರ್ಷ: YSRCP ಕಚೇರಿ ಬಳಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಹೈದರಾಬಾದ್: ಪಟ್ಟಣ ಪಂಚಾಯತ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಟಿಡಿಪಿ ಹಾಗೂ ವೈ ಎಸ್ ಆರ್ ಸಿಪಿ ಕಾರ್ಯಕರ್ತರ ನಡುವೆ ಸಂಘರ್ಷ ಆರಂಭವಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ವೈಎಸ್ ಆರ್ ಸಿಪಿ ಕಚೇರಿ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಆಂಧ್ರದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಟಿಡಿಪಿ ಹಾಗೂ ವೈಎಸ್ ಆರ‍್ ಸಿಪಿ ಕಾರ್ಯಕರ್ತರ ನಡುವೆ ಗಲಾಟೆ ಭುಗಿಲೆದ್ದಿದೆ. ವೈಎಸ್ ಆರ‍್ ಸಿಪಿ ಕಚೇರಿ ಮುಂದೆ ಇಲ್ಲಿಸಿದ್ದ ಸಿಕ್ಕ ಸಿಕ್ಕ ವಾಹನಗಳಿಗೆ ಟಿಡಿಪಿ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಟಿಡಿಪಿ ಹಾಗೂ ವೈಎಸ್ ಆರ‍್ ಸಿಪಿ ನಾಯಕರು ಹಾಗೂ ಕಾರ್ಯಕರ್ತರು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು, ಈ ವೇಳೆ ವೈಎಸ್ ಆರ್ ಪಿ ಸಂಸದ ಮಿಥುನ್ ರೆಡ್ಡಿ ಕಾರಿಗೆ ಟಿಡಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಮಿಥುನ್ ರೆಡ್ಡಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮಿಥುನ್ ರೆಡ್ಡಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ವೈಎಸ್ ಆರ್ ಸಿಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ, ಹೊಡೆದಾಟ ಆರಂಭವಾಗಿದೆ. ವೈಎಸ್ ಆರ್ ಸಿಪಿ ಕಚೇರಿ ಬಳಿ ನಿಲ್ಲಿಸಿದ್ದ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನಾ ಸ್ಥಳಕ್ಕೆ ಪೊಲಿಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ವಿಷಾಹಾರ ಸೇವಿಸಿ ಬಿಎಸ್ ಎಫ್ ನ 78 ಸಿಬ್ಬಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಇಂಫಾಲ: ಬೆಳಗಿನ ಉಪಹಾರ ಸೇಸಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಸಿಬ್ಬಂದಿ ಹಾಗೂ ಮೂವರು ನಾಗರಿಕರು ಸೇರಿದಂತೆ 78 ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.

ಮಣಿಪುರದ ಬಿಎಸ್ ಎಫ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಕ್ಯಾಂಪ್ ನಲ್ಲಿ ಬೆಳಿಗ್ಗೆ ನೀಡಲಾಗಿದ್ದ ಉಪಹಾರ ಸೇವಿಸಿದ ಬಳಿಕ ಎಸ್ ಎಫ್ ನ 75 ಸಿಬ್ಬಂದಿಗಳು ಹಾಗೂ ಮೂವರು ನಾಗರಿಕರು ವಾಂತಿ-ಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಹಲವರಲ್ಲಿ ಪದೇ ಪದೇ ವಾಂತಿಯಾಗಿದೆ. ಇಡೀ ಕ್ಯಾಂಪ್ ಸಿಬ್ಬಂದಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.

ಅಸ್ವಸ್ಥರನ್ನು ತಕ್ಷಣ ಇಂಫಾಲದ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಾಹಾರ ಸೇವಿಸಿ ಫುಡ್ ಪಾಯಿಸನಿಂಗ್ ಆಗಿದೆ ಎಂದು ಆರ್‌ಐಎಂಎಸ್ (RIMS) ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಡಾ. ರಮೇಶ್ವರ್ ಸಿಂಗ್ ತಿಳಿಸಿದ್ದಾರೆ.

ಬೆಳಗಿನ ಉಪಹಾರ ಸೇವಿಸಿದ ನಂತರ ಬಿಎಸ್‌ಎಫ್‌ನ ಸಂಪೂರ್ಣ ತುಕಡಿಯ ಸಿಬ್ಬಂದಿಗೆ ಪದೇ ಪದೇ ವಾಂತಿಯಿಂದ ಬಳಲಿದ್ದಾರೆ. ತಕ್ಷಣ ಅವರನ್ನು ನಮ್ಮ ಒಪಿಡಿ (OPD) ವಿಭಾಗಕ್ಕೆ ಕರೆತರಲಾಯಿತು. ಇದೊಂದು ಆಹಾರ ವಿಷಬಾಧೆಯ ಪ್ರಕರಣವಾಗಿದೆ. ಅವರೆಲ್ಲರೂ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಅಗತ್ಯವಾದ ದ್ರವಾಹಾರವನ್ನು (fluids) ನೀಡುತ್ತಿದ್ದೇವೆ… ಕೆಲವೇ ಗಂಟೆಗಳಲ್ಲಿ ಎಲ್ಲ ರೋಗಿಗಳು ಗುಣಮುಖರಾಗಲಿದ್ದಾರೆ. ಇದರಲ್ಲಿ ಮೂವರು ನಾಗರಿಕರು ಸೇರಿದಂತೆ ಒಟ್ಟು 78 ಬಿಎಸ್‌ಎಫ್ ಸಿಬ್ಬಂದಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular