HomeIndiaಇದೆಂತಹ ವಿಲಕ್ಷಣ ಘಟನೆ: ಹುಟ್ಟುಹಬ್ಬದ ದಿನವೇ ಯುವತಿ ಬರ್ಬರ ಹತ್ಯೆ; ಸರ್ಪ್ರೈಸ್ ಎಂದು ಲಿಂಗಬದಲಾವಣೆ ಮಾಡಿಸಿಕೊಂಡು...

ಇದೆಂತಹ ವಿಲಕ್ಷಣ ಘಟನೆ: ಹುಟ್ಟುಹಬ್ಬದ ದಿನವೇ ಯುವತಿ ಬರ್ಬರ ಹತ್ಯೆ; ಸರ್ಪ್ರೈಸ್ ಎಂದು ಲಿಂಗಬದಲಾವಣೆ ಮಾಡಿಸಿಕೊಂಡು ಕೃತ್ಯ

ಚೆನ್ನೈ: ಹುಟ್ಟುಹಬ್ಬದ ದಿನವೇ ಟೆಕ್ಕಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನಂದಿನಿ ಕೊಲೆಯಾದ ಸಾಫ್ಟ್ ವೇರ್ ಉದ್ಯೋಗಿ. ನಂದಿನಿಯ ಬಾಲ್ಯ ಸ್ನೇಹಿತೆ ಲಿಂಗ ಪರುವರ್ತನೆ ಮಾಡಿಸಿಕೊಂಡು ಈ ಕೃತ್ಯವೆಸಗಿರುವುದು ಬಹಿರಂಗವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಂಡಿಮಹೇಶ್ವರಿ ಎಂಬುವವಳು ಯುವತಿ ನಂದಿನಿ ಜೊತೆಯೇ ಮಧುರೈ ಶಾಲೆಯಲ್ಲಿ ಓದುತ್ತಿದ್ದಳು. ನಂದಿನಿ ಹಾಗೂ ಪಾಂಡಿಮಹೇಶ್ವರಿ ಇಬ್ಬರೂ ಸ್ನೇಹಿತೆಯರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ನಂದಿನಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಳು. ಈ ವೇಳೆ ಪಾಂಡಿಮಹೇಶ್ವರಿ ಶಸ್ತ್ರಚಿಕಿತ್ಸೆ ಮೂಲಕ ಲಿಂಗಬದಲಾವಣೆ ಮಾಡಿಸಿಕೊಂಡು ವೆಟ್ರಿಮಾರನ್ ಎಂದು ಹೆಸರು ಬದಲಿಸಿಕೊಂಡಿದ್ದಳು.

ಪಾಂಡಿಮಹೇಶ್ವರಿ ಲಿಂಗಬದಲಾವಣೆ ಮಾಡಿಸಿಕೊಂಡ ಬಳಿಕವೂ ನಂದಿನಿ ಮಾನವೀಯತೆ ದೃಷ್ಟಿಯಿಂದ ಸ್ನೇಹದಲ್ಲಿದ್ದಳು. ಅಲ್ಲದೇ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ವೆಟ್ರಿಮಾರನ್ (ಪಾಂಡಿಮಹೇಶ್ವರಿ) ತನ್ನನ್ನು ಮದುವೆಯಾಗುವಂತೆ ನಂದಿನಿಗೆ ಪೀಡಿಸಲು ಆರಂಭಿಸಿದ್ದ. ಇದಕ್ಕೆ ನಂದಿನಿ ನಿರಾಕರಿಸಿದ್ದಳು.

ನಂದಿನಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ವೆಟ್ರಿಮಾರನ್ ಆಕೆಯನ್ನು ಕೊಲೆಮಾಡಲು ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ನಂದಿನಿ ಹುಟ್ಟುಹಬ್ಬದ ದಿನ ಆಕೆಯ ಮನೆಗೆ ಬಂದ ವೆಟ್ರಿಮಾರನ್ ಸರ್ಪ್ರೈಸ್ ಎಂದು ಕಣ್ಣಿಗೆ ಬಟ್ಟೆಕಟ್ಟಿ ಕರೆದೊಯ್ದು ಬಳಿಕ ಆಕೆಯನ್ನು ಸರಪಳಿಯಿಂದ ಬಿಗಿದು, ಸಜೀವ ದಹನ ಮಾಡಿದ್ದಾನೆ. ಚೆನ್ನೈನ ಕೆಳಂಬಕ್ಕಂ ಬಳಿಯ ತಲಂಬೂರ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ

For Latest News Updates, Join Our Whatsapp Community🚩
RELATED ARTICLES

Most Popular