HomeLatest Newsವರದಕ್ಷಿಣೆ ಕಿರುಕುಳ: ಮನನೊಂದ ನವವಿವಾಹಿತೆ ಆತ್ಮಹತ್ಯೆಗೆ ಶರಣು

ವರದಕ್ಷಿಣೆ ಕಿರುಕುಳ: ಮನನೊಂದ ನವವಿವಾಹಿತೆ ಆತ್ಮಹತ್ಯೆಗೆ ಶರಣು

ಚೆನ್ನೈ: ಲಕ್ಷಾಂತರ ರೂಪಾಯಿ ವರದಕ್ಷಿಣೆ, ಚಿನ್ನಾಭರಣಗಾಳನ್ನೂ ಕೊಟ್ಟು ವಿವಾಹ ಮಾಡಿಕೊಟ್ಟರೂ ಪತಿ, ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ನವವಿವಾಹಿತೆ ರಿಧನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಏಪ್ರಿಲ್ ನಲ್ಲಿ ರಿಧನ್ಯಾ, ಕವಿನ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ, 70 ಲಕ್ಷ ಮೌಲ್ಯದ ವೋಲ್ವೋ ಕಾರು, ಹಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದಾಗ್ಯೂ ಪತಿಯ ಮನೆಯಲ್ಲಿ ಹಿಂಸಿಸುತ್ತಿರುವುದಾ ಸಾಯುವ ಮುನ್ನ ರಿಧನ್ಯ ತನ್ನ ತಂದೆಗೆ ಕಳುಹಿಸಿದ ವಾಟ್ಸಪ್ ಸಂದೇಶಲ್ಲಿ ತಿಳಿಸಿದ್ದಳು.

ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಪೋಷಕರಿಗೆ ಕರೆ ಮಾಡಿ ಹೇಳಿದ್ದ ರಿಧನ್ಯಾ, ಮಾರ್ಗ ಮಧ್ಯೆ ತನ್ನ ಕಾರು ನಿಲ್ಲಿಸಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹಳ ಸಮಯದಿಂದ ಒಂದೇ ಜಾಗದಲ್ಲಿ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ರಿಧನ್ಯಾ ಬಾಯಿಯಿಂದ ನೊರೆಬರುತ್ತಿತ್ತು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಸಾವನ್ನಪ್ಪಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾವಿಗೂ ಮುನ್ನ ರಿಧನ್ಯಾ ತನ್ನ ತಂದೆಗೆ ವಾಟ್ಸಪ್ ಮೂಲಕ 7 ಬಾರಿ ಆಡಿಯೋ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಪತಿಯ ಮನೆಯಲ್ಲಿ ಕೊಡುತ್ತಿರುವ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಅದಿಕೊಳ್ಳುತ್ತಿದ್ದು, ನನ್ನನ್ನು ಕ್ಷಿಮಿಸಿ ಎಂದು ಹೇಳಿದ್ದಳು.

ಮತ್ತೊಂದು ಸಂದೇಶದಲ್ಲಿ ಅತ್ತೆ ಮನೆಯವರು ನನ್ನನ್ನು ಬೇರೊಬ್ಬನನ್ನು ಮದುವೆಯಾಗಲು ಹೇಳುತ್ತಿದ್ದಾರೆ. ಚಿತ್ರ ಹಿಂಸೆ ನೀಡುತ್ತಿದ್ದಾರೆ. ಅವರು ಕೊಡುವ ಹಿಂಸೆ ಯಾರ ಬಳಿ ಹೇಳಿಕೊಳ್ಳಲಿ ಗೊತ್ತಾಗುತ್ತಿಲ್ಲ ಎಂದು ಎಂದು ಕಣ್ಣೀರಿಟ್ಟಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular