HomeCrimeಗೆಳೆಯನ ಎದುರಲ್ಲೇ ಯುವತಿ ಮೇಲೆ ಗ್ಯಾಂಗ್‌ ರೇಪ್

ಗೆಳೆಯನ ಎದುರಲ್ಲೇ ಯುವತಿ ಮೇಲೆ ಗ್ಯಾಂಗ್‌ ರೇಪ್

ತಮಿಳುನಾಡಿನ ಕಾಂಚೀಪುರಂನಲ್ಲಿ‌ ಬೆಂಗಳೂರು-ಪುದುಚೇರಿ ಹೆದ್ದಾರಿ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಖಾಸಗಿ ಶಾಲೆಯ ಬಳಿ ಮಾತನಾಡುತ್ತಿದ್ದಾಗ ಐದು ಜನರ ತಂಡ ಅವರನ್ನು ಸುತ್ತುವರೆದು ಸಂತ್ರಸ್ತೆಯ ಸ್ನೇಹಿತನಿಗೆ ಚಾಕು ತೋರಿಸಿ ಬೆದರಿಸಿತ್ತು. ನಂತರ ಅವರು ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿ ಒಪ್ಪದಿದ್ದರೆ ಕೊಲೆ ಮಾಡಿ ಸಮಾಧಿ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಅವಕಾಶ ಸಿಕ್ಕಾಗ ತಪ್ಪಿಸಿಕೊಂಡು ತಮ್ಮ ಸಂಬಂಧಿಕರನ್ನು ತಲುಪಿದ್ದರು. ನಂತರ ಅವರು ಯುವತಿಯನ್ನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಳಕಿಲ್ಲದ ಕಾರಣ ಯಾರನ್ನೂ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಆರೋಪಿಗಳ ಪೈಕಿ ಓರ್ವ ಮತ್ತೊಬ್ಬನನ್ನು ವಿಮಲ್ ಎಂದು ಕರೆಯುತ್ತಿದ್ದನೆಂದು ಮಾಹಿತಿ ನೀಡಿದ್ದರು.

ನಂತರ ಪೊಲೀಸರು ವಿಮಲ್ ನನ್ನು ವಿಪಡು ಗ್ರಾಮಕ್ಕೆ ಪತ್ತೆ ಹಚ್ಚಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸುತ್ತುವರಿದು ಹಿಡಿದಿದ್ದಾರೆ. ವಿಮಲ್ ಮೂಲಕ ತಮಿಳುನಾಡು ಪೊಲೀಸರು ಇತರ ನಾಲ್ವರಾದ ಮಣಿಕಂದನ್, ಶಿವಕುಮಾರ್, ವಿಘ್ನೇಶ್ ಮತ್ತು ತೆನ್ನರಸು ನನ್ನ ಬಂಧಿಸಿದ್ದಾರೆ. ಎಲ್ಲಾ ಐವರು ಆರೋಪಿಗಳ ವಿರುದ್ಧ ಅತ್ಯಾಚಾರ ಆರೋಪಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular